ಸಮುದ್ರ ತೀರದಲ್ಲಿ ಗಟ್ಟಿ ನಿಂತೆನು
ಅಲೆಗಳ ಆಟವ ಮೆಟ್ಟಿ ನಿಂತೆನು
ಅಂಬಿಗ ಇರುವ ದೋಣಿಯು ಬೇಕೆ
ಹಾಯಿ ಕಂಬವ ತಟ್ಟಿ ನಿಂತೆನು
ಪಕ್ಷಿಗಳು ಹೇಗೆ ಹಾರುತ್ತಿವೆ ನೋಡು
ಹತ್ತಿರ ಬಂದವು ಅಟ್ಟಿ ನಿಂತೆನು
ಸೂರ್ಯನ ಕೆಂಬಣ್ಣ ಪಶ್ಚಿಮದಲ್ಲಿ ಕಂಡೆ
ರಶ್ಮಿಯನು ದಾರದಿಂದ ಕಟ್ಟಿ ನಿಂತೆನು
ಉಲ್ಲಾಸದ ನವಜೋಡಿಯ ನೋಡು ಈಶ
ಮೋಹಕ ದೇಹಗಳ ಮುಟ್ಟಿ ನಿಂತೆನು
-ಹಾ ಮ ಸತೀಶ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!