ಸಹಕಾರೀ ಪ್ರಕಾಶನದ "ಚಿತ್ರಗುಪ್ತ". ಬೆಂಗಳೂರು ಮಾಧವ ನಗರದ 'ಶ್ರೀ ನಿಲಯ' ದಿಂದ ಎ. ಆರ್. ತಿರುಮಲಯ್ಯರವರು ಪ್ರಕಾಶನಗೊಳಿಸುತ್ತಿದ್ದ 'ಸಹಕಾರೀ ಪ್ರಕಾಶನ'ದ ಏಕಮೇವ ವಾರಪತ್ರಿಕೆಯಾಗಿತ್ತು "ಚಿತ್ರಗುಪ್ತ".
ಎಚ್. ಎಸ್. ರೇಣುಕಾ. ಪ್ರಸಾದ್ ಅವರು ಗೌರವ ಪ್ರಧಾನ ಸಂಪಾದಕರಾಗಿದ್ದ " ಚಿತ್ರಗುಪ್ತ"ವನ್ನು ಬೆಂಗಳೂರು ಕ್ರೆಸೆಂಟ್ ರಸ್ತೆಯ ಪ್ರಪಂಚ ಪ್ರಕಾಶನದಲ್ಲಿ ಪಾಟೀಲ್ ಸಿದ್ಧಣ್ಣ ಅವರು ಮುದ್ರಿಸುತ್ತಿದ್ದರು. ಎ. ಆರ್. ತಿರುಮಲೆ ಸಂಪಾದಕರಾಗಿದ್ದರು. ೧೯೩೯ರಲ್ಲಿ ಪ್ರಕಟಣೆ ಆರಂಭಿಸಿದ "ಚಿತ್ರಗುಪ್ತ",ಕ್ಕೆ ೬೦ರ ದಶಕದಲ್ಲಿ ೨೦ ಪೈಸೆ ಬೆಲೆಯಿತ್ತು. ೧೬ ಪುಟಗಳ ಪುಸ್ತಕವಾಗಿತ್ತು.
ಕೆ. ಎಂ. ನಂಜಪ್ಪ (ಅಧ್ಯಕ್ಷರು), ಗುಡಿಬಂಡೆ ರಾಮರಾವ್ (ಉಪಾಧ್ಯಕ್ಷರು), ಎಸ್. ವಿ. ಕೆ. ರಾಜನ್ (ಕೋಶಾಧಿಕಾರಿ), ಎ. ಆರ್. ತಿರುಮಲೆ (ಕಾರ್ಯದರ್ಶಿ ಮತ್ತು ಸಂಪಾದಕರು), ಶ್ರೀಮತಿ ಗುರುದೇವಿ ಹಿರೇಮಠ, ಆರ್. ಆನಂತರಾಮನ್, ತಿಮ್ಮಯ್ಯ, ಬಣಕಾರ, ಕೆ. ಆರ್. ನಾಡಗೌಡ, ಜಿ. ವೆಂಕಟಸುಬ್ಬಯ್ಯ, ಕೆ. ನೀಲಕಂಠ ರಾವ್, ಸಿ. ಎಂ. ದೇಸಾಯ್, ಜಿ. ರಾಮೇಗೌಡ (ನಿರ್ದೇಶಕರು) ಇವರನ್ನೊಳಗೊಂಡ ಆಡಳಿತ ಮಂಡಳಿಯು "ಚಿತ್ರಗುಪ್ತ ಸಹಕಾರೀ ಪ್ರಕಾಶನ" ದ ಮೂಲಕ ವಾರ ಪತ್ರಿಕೆಯನ್ನು ಪ್ರಕಟಿಸುತ್ತಿತ್ತು.
ಕತೆ, ಧಾರಾವಾಹಿ, ಸಾಹಿತ್ಯಿಕ, ಸಾಮಾಜಿಕ ಲೇಖನಗಳು, ಮಕ್ಕಳಿಗಾಗಿ ಸಾಹಿತ್ಯ, ಸಿನಿಮಾ ಬರಹಗಳ ಸಹಿತ ವೈವಿಧ್ಯಮಯ ಬರಹಗಳು "ಚಿತ್ರಗುಪ್ತ" ದಲ್ಲಿ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!