೧.

ಕನಸುಗಳ ಜೊತೆಗೇ ತಿರುಗುತಿರೆ ಉಪವಾಸ ಇದ್ದು ಬಿಡು

ನನಸುಗಳು ಸಿಗದೇ ಹೋದರು ಮನಸುಗಳ ಕದ್ದು ಬಿಡು

 

ನೀತಿಗಳು ಮಣ್ಣಲೇ ಮಣ್ಣಾಗುತಿರೆ ಸಿಗುವುದೆ ನ್ಯಾಯ ಹೇಳು

ಅನೀತಿಗಳು ಬಂದರೇ ಬರದಿರದು ಸುಳ್ಳುಗಳ ಒದ್ದು ಬಿಡು

 

ಚೆಲುವುಗಳ ನಡುವೇ ಸೌಂದರ್ಯ ಅರಳುವುದು ಸತ್ಯವೆ ಈಗ

ಅನುರಾಗವ ಕಂಡರೇ ಕೈಹಿಡಿದು ಬರಸೆಳೆದು ಹೊದ್ದು ಬಿಡು

 

ಹೋಗಿರುವ ಒಲುಮೇ ಸರಿಸುತಿರು ದೂರಕೆ ಹೀಗೆಯೆ ಬಾನು

ಮನೆಯೊಳಗೆ ಪ್ರೀತಿಯದು ಸೊರಗುತಿರೆ ಅಲ್ಲಿಂದ ಎದ್ದು ಬಿಡು

 

ನೋಟಗಳು ಹೊಂದದೇ ಮೌನದಲಿ ಸಾಗುತಿರೆ ಸಂಸಾರವೇ ಈಶಾ

ಆಟಗಳು ಜೇವನದ ಪಾಠಗಳೆ ಅಲ್ಲಿಯೇ ಬಿದ್ದು ಬಿಡು

***

೨.

ಎಲ್ಲಿಯೂ ನಿಲ್ಲದೇ ಸಾಗುತಿರುವೆ ನಲ್ಲೆಯೆ

ಬದುಕಿನಾ ಒಳಗಿಂದ ಕಾಡುತಿರುವೆ ನಲ್ಲೆಯೆ

 

ಜೀವನದ ಪ್ರೀತಿಯ ಅರಿಯದೆ ಹೋದೆನೆ

ಸುಡುತಿರುವ ಕತೆಯನ್ನು ಹೇಳುತಿರುವೆ ನಲ್ಲೆಯೆ

 

ತುತ್ತತುದಿಯ ಶಿಖರದಲ್ಲಿ ಪ್ರಾಣಪಕ್ಷಿ ಹಾರಿದೆ

ಕನಸಿನಲ್ಲಿ ನೋವಿನಾಟ ಆಡುತಿರುವೆ ನಲ್ಲೆಯೆ

 

ಬಾನಬಯಲ ತಾರೆಯಂತೆ ನೀನುಯೆಂದು ತಿಳಿದೆನಾ

ಬುವಿಗೆ ಬರದೆ ಸನಿಹಯಿರದೆ ಸೋಲುತಿರುವೆ ನಲ್ಲೆಯೆ

 

ಈಶನಿಂದು ನನಸಿನೊಡನೆ ಸಾಗುತಿಹನು ನೋಡೆಯಾ

ಮತ್ತೆಯೇಕೆ ದೂರವಾದೆ ಕೇಳುತಿರುವೆ ನಲ್ಲೆಯೆ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ