ಮನದಲಿ ಬಯಕೆಯಿದ್ದರೂ ಬಾಗಿದ ಮುದುಕನಾಗಿರುವೆ
ಅಂತರಾತ್ಮ ಮಿನುಗಿದರೂ ಸೊರಗಿದ ಭಿಕ್ಷುಕನಾಗಿರುವೆ
ತೀರಗಳಿಗೆಂದೂ ಹೊಡೆಯುವ ಅಲೆಗಳಲ್ಲೀಗ ಆರ್ಭಟವಿಲ್ಲವೆ
ಕಣ್ಣುಗಳಿಂದು ಹೊರಳುತ್ತಿದ್ದರೂ ಕಾಣದೆಯೆ ಕುರುಡನಾಗಿರುವೆ
ಬೇಟೆಯೊಳಗಿನ ಧ್ವನಿಗಳಿಂದು ಎಂದೆಂದಿಗೂ ಕೇಳದಾಗಿದೆ
ಕಿವಿಯೊಳಗಿನ ಅಂಗಗಳು ಸರಿಯಿದ್ದರೂ ಕಿವುಡನಾಗಿರುವೆ
ಮೋಸಗಾರರ ನಡುವಿನಿಂದಲೂ ತಪ್ಪಿಸಲಾಗದೆಯೇ ಇರುವೆನು
ಎಲ್ಲಿಯೂ ಹೋಗಲಾರದೆಯೆ ನಾನಿಂದು ಸಣ್ಣವನಾಗಿರುವೆನು
ಮಾತನಾಡುವ ಹಕ್ಕುಗಳನ್ನೆ ಕಳೆದುಕೊಂಡಿರುವೆ ಈಶನೆ
ಕಾರಣವಿಲ್ಲದೆ ಬಹಳ ದಿನಗಳಿಂದಲೂ ಮೂಗನಾಗಿರುವೆ
***
ಹೀಗೆ - ಹೀಗೆಯೆ
ತಪ್ಪನ್ನು ತಪ್ಪು ಅನ್ನುವುದರಲ್ಲಿ
ತಪ್ಪಿಲ್ಲ, ಆದರೆ ತಪ್ಪೇ ಇಲ್ಲದ
ವಿಷಯಗಳನ್ನು ತಪ್ಪು ಅನ್ನುವುದು
ಮಹಾ ತಪ್ಪು. ಹಾಗೆನ್ನುವವರ
ಸಂಕುಚಿತ ಮನೋಭಾವನೆಯನ್ನ
ಅದು ತೋರಿಸುವುದರ ಜೊತೆಗೆ
ಆ ವಿಷಯಗಳಲ್ಲಿ ತಾನು ಪರಿಪೂರ್ಣನಲ್ಲವೆಂಬುವುದನ್ನೂ
ತೋರಿಸಿಕೊಡುತ್ತದೆ.
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!