ಮಾತಿನೊಳಗೆ

ಹಿಡಿತವಿದ್ದಂತೆಯೇ

ಕೃತಿ ಬರಲಿ !

 

ಒಲವಿನಾಟ

ಹಿತಮಿತದಲ್ಲಿರೆ

ಸುಖ ಸಂಸಾರ !

 

ಕಸ್ತೂರಿಯಲಿ

ಪರಿಮಳವಿದ್ದಂತೆ

ಬದುಕಿರಲಿ!

 

ಸವಿ ನೆನಪು

ಬರುವುದೇ ನನಗೆ

ರಾತ್ರಿಯಾದಂತೆ !

***

ಗಝಲ್

ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯ

ಅತ್ತ ಇತ್ತಲು ವಪ್ಪಿಯ ಹಿಡಿತವೇ ಕಂಡಿದೆ ಗೆಳೆಯ

 

ಮಲ್ಲಿಗೆಯ ಬನದಲ್ಲಿ ಕಂಪ ಪರಿಮಳ ಹರಡದೆ ಇದ್ದೀತೆ

ಮೆಲ್ಲಗೆ ಹತ್ತಿರ  ಪ್ರೀತಿಯದು ಓಡುತ ಬಂದಿದೆ ಗೆಳೆಯ

 

ಹಿಮ ತುಂಬಿದ ನೆಲದಲಿ  ತಂಪಿನೊಲವು  ಪಸರಿಸುತಿದೆ ನೋಡು

ಉಸಿರು ಹಸಿರಿನ ಚೆಲುವಿನೊಳು ಒಲವೊಂದು ನಿಂತಿದೆ ಗೆಳೆಯ

 

ಬಾನು ಬುವಿಯಂತೆ ನನ್ನವಳ ಒಡನಾಟ ಹೀಗೆಯೇ ಸಾಗಲಿ

ಕೈಹಿಡಿದ ನನಸದುವು ಸವಿಗಿಂದು ಹಿತವನು ತಂದಿದೆ ಗೆಳೆಯ

 

ಮನದೊಳಗೆ ಹೊಸ ಬಗೆಯನು ತುಂಬಿ ಸಾಗಿದ ಈಶಾ

ಹಳೆಯ ಕೊಳಕಿನ  ನಡೆಯು ಮೆಲ್ಲನೆ ಕಂತಿದೆ ಗೆಳೆಯ

-ಹಾ .ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ