ಜ್ಞಾನ ಜ್ಯೋತಿಯ
ಉರಿಸುತ್ತಲೇ ಸಾಗು
ಮನದೊಳಗೆ !
ಕಪ್ಪೆಗಳಂತೆ ನೀನು
ವಟಗುಟ್ಟ ಬೇಕೇನು
ರಾಜಕಾರಣಿಯಾಗು !
ಜನರ ಮೇಲೆ
ಎರಗುವ ನಾಯಕ
ದೇಶ ದ್ರೋಹಿಯು !
ಉಪ್ಪಿರದಿಹ
ಸಾರು ,ಸಾರವಿರದ
ಮಾತದು ಸಪ್ಪೆ !
ಜೀವನದಲ್ಲಿ
ಕಾಯ ವಾಚ ಮನಸಾ
ಶುದ್ಧನಾಗಿರು !
ಬದುಕೊಳಗೆ
ಸತ್ಯ ನುಡಿಯುತಿರು
ಮಿಥ್ಯ ಬರದು!
ಗುರಿಯಿರದ
ಬಾಳು,ಹಾಳೂರಿನಂತೆ
ಭಗ್ನ ಮಂದಿರ !
***
ಹುರುಪುಗಳು
ಹುರುಪುಗಳು ಹಸಿಯಾಗಿ ಹೃದಯದಿ ಸೇರಲದು
ಕರಿಭಾವ ತೊರದೆಲೆ ಬೆಳವಣಿಗೆ ಕಾಣಲದು
ಮರೆಯಾಗಿ ಹೋಗದಿರೆ ಸುಮಮನಸ ಹೊಂದಲದು
ಗುರಿಯೊಂದ ತಲುಪುತಲೆ ಜೀವನದಿ ಬಾಳಲದು
***
ಕನಸುಗಳು
ಕನಸುಗಳು ಹುಟ್ಟುವುದು ಚೈತ್ರದಲಿ ನೋಡು
ನನಸಿಂದು ಬರಲೆಂದು ದೇವನಲಿ ಬೇಡು
ಮನವರಳಿ ಕುಣಿಯಲದು ಸವಿಯನ್ನು ಕಾಡು
ತನುವೊಳಗೆ ಬೆರೆಯಲದು ಜೀವನವೆ ಹಾಡು
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!