ರಸ್ತೆಯಲ್ಲಿ ಚಲಿಸ್ತಾ ಇದ್ದ. ಬೈಕು ತನ್ನ ವೇಗವನ್ನ ಹೆಚ್ಚು ಮಾಡ್ತಾನೆ ಹೋಗ್ತಾ ಇತ್ತು. ಗಾಡಿಯ ಬೆಳಕು ಅಷ್ಟೇನೂ ಪ್ರಕರವಾಗಿರಲಿಲ್ಲ. ಸ್ವಲ್ಪ ರಸ್ತೆ ಕಾಣಿಸ್ತಾ ಇತ್ತು. ಆದರೆ ಮುಂದೆ ಹೋಗುತ್ತಿರುವಂತಹ ಗಾಡಿಯ ಬೆಳಕು ಬಹಳ ತೀವ್ರವಾಗಿದ್ದು ರಸ್ತೆಯನ್ನು ತುಂಬಾ ಸ್ಪಷ್ಟವಾಗಿ ತೋರಿಸ್ತಾ ಇತ್ತು. ಗಾಡಿ ಬಿಡ್ತಾ ಇದ್ದವನಿಗೆ ತನ್ನ ಗಾಡಿಯ ಬೆಳಕಿನ ಅವಶ್ಯಕತೆ ಬರಲಿಲ್ಲ. ಮುಂದಿನ ಗಾಡಿಯ ಬೆಳಕಿನಲ್ಲಿ ಇವನ ಗಾಡಿಯು ಚಲಿಸೋದಕ್ಕೆ ಪ್ರಾರಂಭವಾಯಿತು. ಮುಂದೆ ಒಂದು ತಿರುವಿನಲ್ಲಿ ಇವನು ಹೋಗಬೇಕಾದ ದಾರಿಯಲ್ಲಿ ಆ ಗಾಡಿ ಚಲಿಸಲಿಲ್ಲ. ಬೆಳಕಿನ ಕೊರತೆ ಆದರೂ ತನ್ನ ಗಾಡಿಯ ಬೆಳಕನ್ನ ನಂಬಿಕೊಂಡು ನಿಧಾನಕ್ಕೆ ಚಲಿಸುವುದಕ್ಕೆ ಪ್ರಾರಂಭ ಮಾಡಿದ. ವೇಗ ತುಂಬಾ ಕಡಿಮೆಯಾಗಿತ್ತು. ಆದರೂ ಎಲ್ಲೂ ಕೂಡ ಗಾಡಿಯನ್ನು ನಿಲ್ಲಿಸದೆ ಜಾಗರೂಕತೆಯಿಂದ ತಲುಪಬೇಕಾದ ಜಾಗವನ್ನು ತಲುಪಿಬಿಟ್ಟ .ಹಾಗೆ ಮಕ್ಕಳೇ ದಾರಿ ತೋರಿಸಲು ಒಂದಷ್ಟು ದೂರದವರೆಗೆ ಜನ ಜೊತೆಗಿರಬಹುದು ಆದರೆ . ನಮ್ಮ ದಾರಿಗ ನಾವೇ ಬೆಳಕಾಗಬೇಕು ಅಂದರೆ ನನ್ನ ಕಾಲು ಚಲಿಸುವ ದಾರಿಗೆ ನನ್ನ ಕೈ ತೋರಿಸುವ ಬೆಳಕು ಮಾತ್ರ ದಾರಿ ತೋರಿಸುವುದಕ್ಕೆ ಸಾಧ್ಯ ಅದಕ್ಕೆ ನಾವು ತಲುಪುವ ದೂರವನ್ನು ಅವಲಂಬಿಸಿ ನನ್ನ ಜೀವನಕ್ಕೆ ಬೇಕಾದ ಬೆಳಕನ್ನ ತಯಾರಿ ಮಾಡಿಟ್ಟುಕೊಳ್ಳುವುದು ತುಂಬಾ ಅವಶ್ಯಕ ಅಂತ ಅನಿಸುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!