ಮೋಹದಾಟ ಎನ್ನುವುದೀಗ ಭ್ರಮೆಯಂತಾಗಿದೆ ಗೆಳತಿ
ಪಾರದರ್ಶಕದ ವ್ಯವಸ್ಥೆಯೇ ಸೋಲುವಂತಾಗಿದೆ ಗೆಳತಿ
ಸುಳಿಯಲೆಗೆ ಸಿಲುಕಿರುವ ದೋಣಿಯಲ್ಲಿರುವ ಅಂಬಿಗನಂತೆ
ಜೀವನವು ಅಲೆಯಬ್ಬರಕ್ಕೆದುರಾದ ಮೀನಿನಂತಾಗಿದೆ ಗೆಳತಿ
ಪ್ರೀತಿಯದು ಹಿಮಾಲಯದೊಳಗಲ್ಲಿಯೆ ಬಿದ್ದವರಂತೆ ಆಗಿದೆಯೇಕೆ
ಪ್ರೇಮದಾಳವದುಯಿಂದು ನಿಜವಾಗಿಯೂ ಕಣ್ಣಿಲ್ಲದಂತಾಗಿದೆ ಗೆಳತಿ
ವಾತ್ಸಲ್ಯವೆನ್ನುವ ಪದಗಳಿಗೆ ಅರ್ಥವಿಂದು ಇದೆಯೇನು
ಗೋರಿಯೊಳಗೇ ಸೇರಿರುವ ಮಂದಿಯಂತಾಗಿದೆ ಗೆಳತಿ
ಬಾಳೊಳಗಿನ ಪಯಣವು ದುರಂತದಲ್ಲಿ ಮುಗಿಯುವುದೇ ಈಶಾ
ಬಾಳೆನ್ನುವುದಿಂದು ಚಿತ್ತಾರವಿಲ್ಲದಿರುವ ಪಯಣದಂತಾಗಿದೆ ಗೆಳತಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!