ಯಾರ ಒಲವು ಹೇಗಿರಲಿ
ನಿನ್ನ ನಲಿವು ನನಗಿರಲಿ
ಪ್ರೀತಿಯೆನುವ ಮಾತಿನಲಿ
ಪ್ರೇಮ ಜ್ಯೋತಿ ಅರಳಲಿ
ಮನದಿ ಪುಟಿವ ಕಾರಂಜಿಲಿ
ನಲುಮೆ ಹೆಸರೆ ತುಂಬಲಿ
ಜೀವ ಎನುವ ಹೃದಯದಲಿ
ಒಲುಮೆ ಭಾಗ್ಯ ಹರಡಲಿ
ಚಿತ್ತಾರದ ಚಿತ್ರಗಳಲಿ
ಚಿತ್ತ ಸೇರಿ ಹಾಡಲಿ
ಚೈತ್ರ ಬೆಸುಗೆ ಮತ್ತಿನಲಿ
ಚಿತ್ತದಾಳ ಸುಖಿಸಲಿ
ಹೊನ್ನ ಕಣ್ಣ ಚೆಲುವಿನಲಿ
ಹೊನ್ನಿನುಡುಗೆ ಕಾಣುತಲಿ
ಹೂಮೊಗದಲಿ ನಗುವು ಇರಲಿ
ಹೂವಿನಂದ ಬೆರೆಯಲಿ
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!