ಊರಲ್ಲಿ ಸಂಭ್ರಮವಾದರೆ ಸಾಕು ವೇಷಗಳು ಹಾಗೆ ಹೊರಟು ಬರುತ್ತವೆ. ವೇಷಗಳು ಕೆಲವು ಸೇವೆಗಾದರೆ, ಕೆಲವು ದೈನಂದಿನದ ಜೀವನ ಸಾಗಿಸೋಕೆ ..ಆ ದಿನದ ವೇಷದ ಹಿನ್ನೆಲೆಯ ಕಾರಣಗಳು ಅವರಿಗೆ ಗೊತ್ತಿಲ್ಲ. ಬಣ್ಣಗಳ ವಿಚಾರ ಗೊತ್ತಿಲ್ಲ ಧರಿಸಿರುವ ಬಟ್ಟೆಗಳಿಗೆ ಮೌಲಿಕವಾದ ಸಂದೇಶಗಳಿವೆಯೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಒಟ್ಟಿನಲ್ಲಿ ಮುಖಕ್ಕೊಂದು ಕೈಗೆ ಸಿಕ್ಕೆ ಬಣ್ಣ ಹಚ್ಚಿಕೊಂಡವರು ಅಲ್ಲಲ್ಲಿ ಬೇಡುತ್ತಾರೆ. ಮುಖವು ಕಾಣದ ಹಾಗೆ ಬಣ್ಣವು ಮರೆಮಾಚಿ ಮನಸ್ಸಗೊಂದಿಷ್ಟು ನೆಮ್ಮದಿ, ಎಂದಿಗಿಂತ ಒಂದಷ್ಟು ಹೊಸ ರೀತಿಯ ಬದುಕು ಅಂದಿನದು. ಆಗಾಗ ಇಂಥಹ ದಿನಗಳಿಗೆ ಅವರು ಕಾಯುತ್ತಾರೆ... ನಾಲಗೆಗೆ ಬಣ್ಣ ಹಚ್ಚುವುದಕ್ಕಿಂತ ಮುಖಕ್ಕೆ ಬಣ್ಣ ಹಚ್ಚುವವರೇ ಒಳಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!