ಅಜ್ಜ ತಯಾರಾಗ್ತಾ ಇದ್ರು, ವರ್ಷ 90 ದಾಟಿತ್ತು. ದೇಹವಾಗಿತ್ತು ಮುಖದಲ್ಲಿ ನೆರಿಗೆಗಳು ತಾ ಮುಂದು ತಾ ಮುಂದು ಎನ್ನುವಂತೆ ಮೂಡಿದ್ದವು. ಉಸಿರು ನಿಧಾನವಾಗಿ ಕಡಿಮೆಯಾಗುತ್ತಿತ್ತು ಆದರೆ ಆ ದಿನ ಅಜ್ಜ ತುಂಬಾ ತಯಾರಿಯನ್ನ ಮಾಡ್ಕೊಂಡ್ರು, ಚಂದದ ಬಟ್ಟೆಗಳನ್ನ ಧರಿಸುವುದು ಬೇಕಾಗಿರುವ ವಸ್ತುಗಳನ್ನೆಲ್ಲ ಕಣ್ಣ ಮುಂದೆ ಇಟ್ಟುಕೊಳ್ಳುವುದು ಬದುಕಿನಲ್ಲಿ ಸಿಗದಿರುವುದನ್ನ ಪಡೆದುಕೊಳ್ಳುವುದಕ್ಕೆ ಪ್ರಯತ್ನಪಡುವುದು ಹೀಗೆ ಇಷ್ಟು ದಿನ ಇಲ್ಲದೆ ಇರುವ ರೀತಿಯಲ್ಲಿ ವರ್ತಿಸುವುದಕ್ಕೆ ಶುರು ಮಾಡಿದ್ರು ನನಗೆ ಸಂಶಯವೆನಿಸಿ ಅವರ ಪಕ್ಕದಲ್ಲಿ ಕುಳಿತು ಏನಜ್ಜ ಅಂತ ಕೇಳಿದ್ದಕ್ಕೆ ನೋಡು ಮಗ ನೀನು ಯಾರದಾದರೂ ನೆಂಟರ ಮನೆಗೆ ಹೊರಡುವಾಗ ಎಲ್ಲ ತಯಾರಿಗಳನ್ನು ಮಾಡ್ಕೊತಿಯಾ, ಪ್ರವಾಸಕ್ಕೆ ಹೋಗುವಾಗಲೂ ತಯಾರಿ ಮಾಡ್ಕೊತಿಯಾ, ಕಾರ್ಯಕ್ರಮಕ್ಕೆ ತೆರಳುವಾಗಲೂ ತಯಾರಿ ಮಾಡ್ಕೊತಿಯ ಹೀಗಿರುವಾಗ ನಿನ್ನ ಬದುಕಿನಂತ್ಯ ಇನ್ನೊಂದು ಸ್ವಲ್ಪ ಸಮಯದಲ್ಲಿ ಬರುವುದಕ್ಕಿದೆ ಆ ಭಗವಂತನ ಬಳಿಗೆ ನೀನು ತೆರಳುದಕ್ಕಿದೆ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡರೆ ಮಾತ್ರ ಅಲ್ಲಿಯೂ ನೆಮ್ಮದಿಯಾಗಿ ಬದುಕಬಹುದು ಹಾಗಾಗಿ ಬದುಕಿನ ಅಂತ್ಯಕ್ಕೂ ತಯಾರಿ ಅತ್ಯಗತ್ಯ. ಹಾಗಾಗಿ ಅದನ್ನು ಮಾಡಿಕೊಳ್ಳುತ್ತಿದ್ದೇನೆ ಎಂದರು ನನಗೆ ಮಾತು ಭಯ ಹುಟ್ಟಿಸಿದರು ಹೌದೆನಿಸಿತು

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ