ನಾವು ಭಾರತೀಯರು

ಭಾಷೆ ಹಲವು

ವೇಷ ಹಲವು

ನಮ್ಮ ಒಡಲು ಭಾರತ

ಧರ್ಮ ಹಲವು

ಪಂಥ ಹಲವು

ಮನುಜರೊಲವು ಭಾರತ

 

ನಮ್ಮ ವಿನಯ

ನಮ್ಮ ಉಸಿರು

ನೆಲದ ಕಸುಪು ಭಾರತ

ನಮ್ಮ ಪ್ರೀತಿ

ನಮ್ಮ ಧ್ಯೇಯ

ಮಣ್ಣ ಕಣವು ಭಾರತ

 

ಹಿಗ್ಗಿ ನಡೆವ

ತಗ್ಗಿ ನುಡಿವ

ಮಾತೆ ಹೊನಲು ಭಾರತ

ಬಾಗಿ ಕರೆವ

ಕೈಯ ಮುಗಿವ

ದೇಶ ನಮದು ಭಾರತ

***

ಯಾರ ಒಲವು ಹೇಗಿರಲಿ

ಯಾರ ಒಲವು ಹೇಗಿರಲಿ

ನಿನ್ನ ನಲಿವು ನನಗಿರಲಿ

ಪ್ರೀತಿಯೆನುವ ಮಾತಿನಲಿ

ಪ್ರೇಮ ಜ್ಯೋತಿ ಅರಳಲಿ

 

ಮನದಿ ಪುಟಿವ ಕಾರಂಜಿಯಲಿ

ನಲುಮೆ ಹೆಸರೆ ತುಂಬಲಿ

ಜೀವ ಎನುವ ಹೃದಯದಲಿ

ಒಲುಮೆ ಭಾಗ್ಯ ಹರಡಲಿ

 

ಚಿತ್ತಾರದ ಚಿತ್ರಗಳಲಿ

ಚಿತ್ತ ಸೇರಿ ಹಾಡಲಿ

ಚೈತ್ರ ಬೆಸುಗೆ ಮತ್ತಿನಲಿ

ಚಿತ್ತದಾಳ ಸುಖಿಸಲಿ

 

ಹೊನ್ನ ಕಣ್ಣ ಚೆಲುವಿನಲಿ

ಹೊನ್ನಿನುಡುಗೆ ಕಾಣಲಿ

ಹೂವಮೊಗದ ನಗುವಿನಲಿ

ಚೆಲುವಿನಂದ ಬೆರೆಯಲಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ