ಆ ಜೀವ ಎಷ್ಟು ದಿನಗಳು ಗಂಟಲು ಹರಿಯುವಾಗೆ ಕೂಗಿಕೊಂಡಿದೆಯೋ ಎಷ್ಟು ಕಣ್ಣೀರು ಸುರಿಸಿದೆಯೋ, ನೀರು ಇಲ್ಲದೆ ಊಟ ಇಲ್ಲದೆ ಎಷ್ಟು ರಾತ್ರಿ ಎಷ್ಟು ಹಗಲು ಕಳೆದಿತ್ತೋ…? ತನ್ನ ಶಕ್ತಿಯಲ್ಲ ಮುಗಿದ ಮೇಲೆ ನಿಸ್ಸಹಾಯಕವಾಗಿ ಆ ಮನಸು ಯಾರಾದರೂ ಬರುತ್ತಾರಾ, ನನ್ನ ಮೇಲೆ ಎಳೆಯುತ್ತಾರಾ ಎಂದು ಎದುರು ನೋಡಿತ್ತೋ..?
ಆ ಜಾಗದಲ್ಲಿ ಒಂದು ಸಲ ನಮ್ಮನ್ನ ನಾವು ಊಹಿಸಿಕೊಂಡರೆ ಅರ್ಥವಾಗುತ್ತದೆ ಅ ನರಕ ವೇದನೆ ಹೇಗಿರಬಹುದು ಎಂದು... ! ಅದಕ್ಕೆ ಬುದ್ಧ ಹೇಳಿರೋದು ಯಾರು ನಿನಗಾಗಿ ಬರಲ್ಲ ಯಾವ ಸಂಬಂಧ ನಿನ್ನೆಡೆಗೆ ನೋಡಲ್ಲ ನೀನು ಹಾಕೋ ಪ್ರತಿ ಹೆಜ್ಜೆ ನೂರು ಸಲ ಯೋಚಿಸಿ ಹಾಕು ನೀನು ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ನೂರು ಸಲ ಯೋಚಿಸಿ ತಗೋ ಅಂತ..!
ನನಗೇನು ಅವರಿದ್ದಾರೆ ಇವರಿದ್ದಾರೆ ಅಂತ ನಂಬಿಕೊಂಡು ಕೂರಬೇಡ ನನಗೆ ಯಾರೂ ಇಲ್ಲ ನನಗೆ ನಾನೇ ಅಂತ ಬದುಕು..! ನಿನ್ನ ಕಷ್ಟದಲ್ಲಿ ಸಹಾಯಕ್ಕೆ ಯಾರಾದರೂ ಬಂದರೆ ಸಂತೋಷ. ಯಾರು ಬರಲಿಲ್ಲ ಅಂದ್ರೆ ಅಯ್ಯೋ ಅವರು ಬರುತ್ತಾರೆ ಅಂದುಕೊಂಡೆ ಇವರು ಬರುತ್ತಾರೆ ಅಂದುಕೊಂಡೆ ಅವರು ಬರಲಿಲ್ಲವಲ್ಲ ಅಂತ ನಿರಾಸೆಯಂತೂ ನಿನಗಿರಲ್ಲ..!
-ಶ್ರೀಧರ್ ಮಾಡಾಳು
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!