ಬದುಕು ಬಣ್ಣ ಬಣ್ಣದ ಬಟ್ಟೆಗಳನ್ನ ಧರಿಸಿ ಸುಮ್ಮನೆ ಅಡ್ಡಾಡುತ್ತಿತ್ತು. ಅಲ್ಲಿ ಹೋಗುವವರು ಅದನ್ನ ಗಮನಿಸಿ ಹೋಗುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬದುಕು ಕಾಣುತ್ತಿತ್ತು. ಆಲೋಚನೆಯ ಕನ್ನಡಕವನ್ನ ಧರಿಸಿದವನಿಗೆ ಮಾತ್ರ ಬದುಕು ಸುಂದರವಾಗಿರುತ್ತದೆ. ಇಲ್ಲವಾದರೆ ಬದುಕನ್ನ ನೋಡೋಕೆ ಆಗದೆ ಇರೋ ತರಹ ಆಗುತ್ತೆ. ಅದಕ್ಕೆ ಬದುಕು ಆಗಾಗಾ ಅಲ್ಲಲ್ಲಿ ಹೇಳ್ತಾನೆ ಹೋಗುತ್ತೆ ನಿಮ್ಮ ಆಲೋಚನೆಗಳೆಂಬ ಕನ್ನಡಕವನ್ನ ಧರಿಸಿ ಆಗ ನನ್ನ ರೂಪ ಸುಂದರವಾಗಿರುತ್ತೆ ಅಂತ. ಆದರೆ ನಾವ್ಯಾರೂ ಬದುಕಿನ ಮಾತನ್ನೇ ಕೇಳೊದೇ ಇಲ್ಲ. ಒಮ್ಮೆ ಆದರೂ ಅದರ ಮಾತು ಕೇಳೋಣ ಆಲೋಚನೆ ಬದಲಾಯಿಸೋಣ ಬದುಕು ತುಂಬಾ ಚೆನ್ನಾಗಿ ಕಾಣುತ್ತೆ. ಏನಂತೀರಿ..?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!