ನೀವು ಬರೆದ
ಕವನವ ಓದಲು
ಕಷ್ಟವೆನಗೆ !
ನಾನು ಬರೆದ
ಕವನವ ಓದಲು
ಕಷ್ಟ ನಿಮಗೆ
ಕಾರಣ ಬಿಡಿ
ನೀವು ನನಗಿದ್ದರೆ
ನಾ ನಿಮಗಿಹೆ !
***
ಹೆಸರು ಪ್ರಶಸ್ತಿಗಾಗಿ
ಸಾಸಿವೆ ಕದ್ದರೂ ಕಳ್ಳನೆ ಆನೆಯ ಕದ್ದರೂ ಕಳ್ಳನೆ
ಚೂರು ಬೇರೆಯವರ ಬರಹವ ಕದ್ದರೂ ಚೌರ್ಯ
ಇಡೀ ಸಾಲುಗಳನು ತನ್ನದೆಂದು ಬರೆದರೂ ಚೌರ್ಯ
ಒಳ್ಳೆಯದೇ ಕವಿ ಲೋಕಕ್ಕೆ ತಿಳಿಯದಾದೆಯಾ ಮಳ್ಳನೆ
***
ಬದುಕೇ ಬರಡಾಗಿರುವಾಗ
ಮಾತು ಬರುವುದೆ ಹೇಳು
ಕಣ್ಣೀರಿನ ಸಂತೆಯೊಳಗೆ
ನನ್ನಿರುವಿನ ಬಾಳು
***
ನನ್ನ ಸೋಲೇ ಗೆಲುವಿಗೆ ದಾರಿಯಾಯ್ತು
ನನ್ನ ಗೆಲುವಿಗೆ ಬೆನ್ನೆಲುಬಾದವರಿಗೆ
ಗೆಲುವಿನಲ್ಲೂ ತಲೆ ಬಾಗಿ ಸೋಲುತ್ತೇನೆ !
***
ಅಭಿನಂದನೆಗಳ ಪಡೆಯಲು
ಇರಬೇಕು ಯೋಗ
ಜೀವನದಿ ನನಸುಗಳೆ ಇರಲು
ಬರಬೇಕು ಯೋಗ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!