ಜೊತೆಗೆ ಯಾರು ಇಲ್ಲ ಹೀಗಾದರೆ ಸಂತೋಷ ಕಂಡುಕೊಳ್ಳುವುದು ಹೇಗೆ ? ಒಬ್ಬಂಟಿಯಾಗಿ ಉಳಿದುಬಿಟ್ಟರೆ ಬದುಕಿನ ಮುಂದೆ ದಾರಿ ಹೇಗೆ, ದಿನವನ್ನು ದೂಡುವುದು ಹೇಗೆ? ಒಟ್ಟಿನಲ್ಲಿ ಬದುಕುವುದು ಹೇಗೆ? ಹಾಗಾಗಿ ಅವಕಾಶಗಳಿಗಾದ್ರೂ ಬದುಕಿನ ಬದಲಾವಣೆಗಾದರೂ ಯಾರ ಬಳಿಯಾದರೂ ಬೇಡಿಕೊಳ್ಳಬೇಕು, ಕೇಳಿಕೊಳ್ಳಬೇಕು. ಹೀಗೆಂದು ಯೋಚನೆ ಮಾಡುತ್ತಿದ್ದವ ಅಪ್ಪನ ಬಳಿ ನೇರವಾಗಿ ಈ ವಿಷಯವನ್ನು ಹೇಳಿದ. ಅಪ್ಪನಿಗೆ ಗೊತ್ತಿತ್ತು ಇವನಿಗೆ ಎಷ್ಟೇ ಮಾತಿನಲ್ಲಿ ಹೇಳಿದರು ಆತ ಅದನ್ನ ಅರ್ಥ ಮಾಡಿಕೊಳ್ಳುವುದಿಲ್ಲ. ಕಣ್ಣ ಮುಂದೆ ಕಾಣುವ ಯಾವುದನ್ನಾದರೂ ವಿವರಿಸಿದರೆ ಆತ ಅರ್ಥ ಮಾಡಿಕೊಡಬಹುದು. ಅವರ ಮನೆಯಲ್ಲಿ ಎರಡು ಬೆಕ್ಕಿನ ಮರಿಗಳು ಮೊದಲನೆಯದು ಯಾರಾದರೂ ಇದ್ದರೆ ಮಾತ್ರ ಮನೆ ಒಳಗೆ ಓಡಾಡ್ತಾ ಇತ್ತು. ಇಲ್ಲವಾದರೆ ಮನೆ ಬಿಟ್ಟು ಎಲ್ಲಾದರೂ ತಿರುಗಾಡ್ಕೊಂಡು ಮನೆಯೊಳಗೆ ಮನುಷ್ಯರ ಓಡಾಟವಿದ್ದಾಗ ಮಾತ್ರ ಮನೆ ಒಳಕ್ಕೆ ಬಂದಿರುತ್ತಾ ಇತ್ತು. ಮನೆ ಒಳಗೆ ಬಂದದ್ದನ್ನು ಮನೆಯೊಳಗಿನವರು ಎತ್ತಿ ಮುದ್ದಾಡಿಸಿ ತಿಂಡಿ ಕೊಟ್ರೆ ಮಾತ್ರ ತಿನ್ನುತ್ತಿತ್ತು. ಆದರೆ ಅವರ ಮನೆಯಲ್ಲಿದ್ದ ಇನ್ನೊಂದು ಬೆಕ್ಕು ಅದು ಯಾರನ್ನು ಗಮನಿಸುತ್ತಿರಲಿಲ್ಲ ಮನೆಯಲ್ಲಿ ಬಿದ್ದಿರುವ ಪೆನ್ನು, ಮುಚ್ಚಳದ ಬಾಟಲ್, ಬಟ್ಟೆ ತುಂಡು ಹೀಗೆ ಪ್ರತಿಯೊಂದು ದಿನವನ್ನು ಸಂಭ್ರಮದಿಂದ ಕಳಿತಾ ಇತ್ತು ಜನರು ಇರಲೇಬೇಕು ತನ್ನನ್ನ ಗಮನಿಸಿ ಮುದ್ದಾಡಬೇಕು ಪ್ರತಿಯೊಂದುರಲ್ಲೂ ಹೊಸ ಬದುಕಿನ ಅವಕಾಶವನ್ನು ಕಾಣುತ್ತ ದಿನವನ್ನು ದೂಡುತ್ತುತ್ತು. ನೋಡು ಇದೆರಡನ್ನ ಕಂಡು ನಿನ್ನ ಬದುಕಿಗೆ ಹೊಸ ದಾರಿ ಸಿಕ್ಕಿದರೆ ಈ ಬೆಕ್ಕುಗಳನ್ನು ಮನೆಯಲ್ಲಿ ಸಾಕಿದ್ದಕ್ಕಾದರೂ ಅರ್ಥ ಬರುತ್ತೆ ಅಂತಂದರು. ಆತನಿಗೆ ತುಂಬಾ ಸುಲಭವಾಗಿ ಅರ್ಥ ಆಯ್ತು ನಮ್ಮ ಖುಷಿಯನ್ನ ನಾವೇ ಕಂಡುಕೊಳ್ಳಬೇಕು ಅದಕ್ಕೆ ಜೊತೆ ನಿಂತವರು ಬೆನ್ನೆಲುಬಾಗಿರಲೇಬೇಕು ಅನ್ನುವ ಯಾವ ಧರ್ದು ಇಲ್ಲ .

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ