ಕಾಯುವಿಕೆ ಭಯ ಹುಟ್ಟಿಸುತ್ತಿದೆ. ಕಾಯುವಿಕೆ ತುಂಬಾ ಖುಷಿ ಕೊಡುತ್ತದೆ ಅಂತ ಹೇಳುವುದನ್ನ ಕೇಳಿದ್ದೆ. ಆದರೂ ಈ ಕಾಯುವಿಕೆ ಭಯ ಹುಟ್ಟಿಸಿದೆ. ಸಂಭ್ರಮವನ್ನ ಎದುರು ನೋಡುವುದಕ್ಕಾದರೂ ಮನಸೊಳಗೆ ಒಂಥರಾ ಭಯ. ಮನೆಗೆ ಮೊದಲ ಮಗುವಿನ ಆಗಮನವಾಗಬೇಕಿದೆ. ಕಾಯುವಿಕೆಗೆ ಭಗವಂತ ಫಲ ಕೊಟ್ಟಿದ್ದಾನೆ. ಹಾಗಾಗಿ ಆಸ್ಪತ್ರೆಯ ಮುಂದೆ ಕೈ ಕಟ್ಟಿ ಅತ್ತಿಂದಿತ್ತ ಓಡಾಡುವುದಾಗಿದೆ. ಈ ಕಾಯುವಿಕೆ ಹೆಚ್ಚಾದಷ್ಟು ಭಯ ಹೆಚ್ಚಾಗಿದೆ. ಎಲ್ಲರ ದೇವರ ಹೆಸರುಗಳು ನಾಲಗೆ ಮೇಲೆ ಉರುಳಾಡುತ್ತಿದೆ. ಕೆಲವು ಮನೆಗಳಲ್ಲಿ ದೇವರ ದೀಪ ಹೆಚ್ಚಾಗಿ ಉರಿಯುತ್ತಿದೆ. ಒಟ್ಟಿನಲ್ಲಿ ಮನೆಯ ಮಗುವಿನ ಆಗಮನಕ್ಕೆ ಪ್ರೀತಿಯಿಂದ ಕಾಯುತ್ತಿದ್ದರೂ ಭಯವೂ ತುಂಬಿದೆ. ಭಗವಂತನ ಮೇಲಿನ ನಂಬಿಕೆಯೊಂದೇ ಉಳಿದು ಬಿಟ್ಟಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!