ಭಾವನೆಗಳ ಜೊತೆಗಿಂದು ಸಾಗುತಿಹೆನು
ಭವದ ಬಂಧನವ ಕಳಚಿ ದೂರವಿಂದು
ಅವರಿವರ ಕನಸುಗಳ ಬಯಕೆ ನನ್ನೊಳು ಇಲ್ಲ
ಸ್ವಾರ್ಥತೆಯ ಸಂಕೋಲೆ ಮೊದಲೆ ಇಲ್ಲ
ಇದ್ದಷ್ಟು ನೆಲದಲ್ಲೇ ಮಲಗಿ ನಿದ್ರಿಸುತಲಿಂದು
ಜೀವನವ ಸವೆಸುವೆನು ಒಲುಮೆಯಿಂದಾ
ಯಾರ ಕುಹಕದ ನುಡಿಗೂ ಜಗಳಾಡೆನೆಂದೂ
ಕೈಹಿಡಿಯದಾ ಜನರ ಜೊತೆ ಸ್ನೇಹ ಬೇಕೇ
ಹಂಗಿಸುವ ಪಂಡಿತರ ಗೊಡವೆ ನನಗೇಕೇ
ಬೇಸರವ ಮಾಡದೆಲೆ ಕೆಲಸ ಮಾಡುತಲಿಂದು
ರೋಷ ದ್ವೇಷವು ಬೇಡ ಎಂದಿನಂತೇ
ಯಾರ ಹಂಗಿಗು ನಾನು ಬಿದ್ದಿಲ್ಲವಂತೇ
ನನಸುಗಳು ಬಂದರೇ ಸ್ವಾಗತವು ಎಂದೂ
ಬರದಿದ್ದರೂ ನನಗೆ ಬೇಸರವು ಇಲ್ಲೆಂದೂ
ಒಂಟಿಯಾಗಿಹ ಪಯಣ ಹಿತವಾಗಿ ಇರಲಿಂದು
ನೇಸರನ ಬೆಳಕಿಂದ ಕಲಿವೆನೆಂದೂ
ಯಾರ ಉರಿಯದು ನನಗೆ ಬೇಡವೆಂದೂ
-ಹಾ.ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!