ಅವರು ಶಾಲೆಗಿಂತ ಹೆಚ್ಚಾಗಿ ಸರಕಾರಿ ಬಂಗಲೆ ಸುತ್ತಿದವರು. ದೊಡ್ಡ ಅಧಿಕಾರಿಗಳ ಕಿಸೆ ತುಂಬಿಸಿದರು, ರಾಜಾಕಾರಣಿಗಳ ಜೈಕಾರ ಕೂಗಿದರು. ಹಲವು ವರ್ಷಗಳ ಎಡಬಿಡದ ನಿರಂತರ ಪ್ರಯತ್ನಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಅವರ ಮುಡಿಗೇರಿತು. ಶಾಲೆಯಲ್ಲಿ ಮಕ್ಕಳಿಗೆ ಜೀವನ ಪಾಠ ಬೋಧಿಸಲಿಲ್ಲ, ಸರಿ ತಪ್ಪು ತಿಳಿಸಲೇ ಇಲ್ಲ, ಪಾಠ ಪುಸ್ತಕ ತಿರುಗಿಸಲೇ ಇಲ್ಲ. ಆದರೆ ದಿನಪತ್ತಿಕೆ ಟಿವಿಯೊಳಗೆ ಅತ್ಯುತ್ತಮ ಶಿಕ್ಷಕರಾಗಿ ಮೂಡಿ ಬಂದರು. ವೇದಿಕೆಯ ಮೇಲೆ ಸನ್ಮಾನ ಸಮಾರಂಭ ಆಯೋಜನೆಯ ನಿರೂಪಣೆಯಲ್ಲಿ ಅದೇ ಶಾಲೆಯ ಇನ್ಮೊಬ್ಬ ಮಾಸ್ತರರ ಜವಾಬ್ದಾರಿ. ಅವರಿಂದ ಊರಿಗೆ ಮಕ್ಕಳಿಗೆ ಒಳಿತಾಗಿದೆ.ಅವರಿಂದ ಶಾಲೆಯ ಸುತ್ತ ಮುತ್ತ ಹಸಿರು ಉಳಿದಿದೆ. ದಾಖಲಾತಿ ಹೆಚ್ವಾಗಿದೆ. ಮಕ್ಕಳ ಅಂಕಗಳಿಕೆ ಏರಿಕೆಯಾಗಿದೆ. ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಅವರಿಗೆ ಯಾವ ಬಹುಮಾನವೂ ಸಿಗಲೇ ಇಲ್ಲ...ಬೇಡಿ ತೆಗೆದುಕೊಳ್ಳುವ ಬಹುಮಾನವೂ ಮೌಲ್ಯ ಕಳೆದುಕೊಂಡು ಬದಿಗೆ ಸರಿದಿದೆ. ಬಹುಮಾನ ಸಿಕ್ಕಿದವರೇ ಶ್ರೇಷ್ಠ ಎನ್ನುವ ವ್ಯಸನ ಹೆಚ್ಚಾಗಿದೆ. ಇನ್ನೊಂದಷ್ಟು ಬಹುಮಾನಗಳು ತೆರೆಮರೆಯಲ್ಲಿ ದುಡ್ಡಿಗೆ ಮಾರಾಟವಾಗಲು ಕಾದು ನಿಂತಿವೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!