ಉಸಿರು ನಿಲ್ಲಿಸಿದ್ದೇನೆ. ಬದುಕು ತುಂಬಾ ಕಷ್ಟವಾಗಿದೆ. ದಿನದ ದುಡಿಮೆಯಿಂದ ಬದುಕು ಮುಂದೆ ಸಾಗ್ತಾಯಿಲ್ಲ. ನೆಲವನ್ನ ನಂಬಿ ಬದುಕು ಸಾಗಿಸುತ್ತಿದ್ದ ನನಗೆ ಬಣ್ಣದ ಲೋಕ ಕೈ ಬೀಸಿ ಕರೆಯಿತು. ಹವ್ಯಾಸವಾಗ ಬೇಕಾಗಿರೋದು ಬದುಕಾಯಿತು ಚಟವಾಯಿತು. ಅದಿಲ್ಲದೆ ಉಸಿರಾಟವೇ ಕಷ್ಟ ಅನ್ನಿಸೊದ್ದಕ್ಕೆ ಪ್ರಾರಂಭವಾಯಿತು. ಬದುಕಿನ ರೀತಿ ನೀತಿ ಬದಲಾದವು. ನೋಡುಗರ ಕಣ್ಣು ಕುಕ್ಕುವುದಕ್ಕೆ ಶುರುವಾಯಿತು. ಬಣ್ಣದ ಬದುಕಿನ ಪರದೆಗಳು  ಸರಿಯೋದಕ್ಕೆ‌ ಆರಂಭವಾಯಿತು. ಅವಕಾಶಗಳು ಇಲ್ಲದಾಯಿತು .ನೋಡುಗರ ದೃಷ್ಟಿಯಲ್ಲಿ ಹಾಗೆ ಬದುಕಬೇಕಿತ್ತು. ಸಾಲ ಹೆಚ್ಚಾಯಿತು ಅವಕಾಶಗಳು ಊರು ಬಿಟ್ವವು. ಟಿ ಆರ್ ಪಿ ಯ ಗುಂಗಿನಲ್ಲಿ ಬದುಕೊಂದು ಕಸವಾಯಿತು. ಬದುಕಿಗಿಂತ ಸಾವು ಆತ್ಮೀಯನಾಯಿತು. ಮೇಲೆ ಕೆಳಗೆ ಓಡುತ್ತಿದ್ದ ಉಸಿರನ್ನು ನಿಲ್ಲಿಸುವುದಕ್ಕೆ ಹೆಜ್ಜೆ ಮುಂದುವರೆಯಿತು. ನನ್ನ ಸಾವಿಗೆ ನಾನೇ ಕಾರಣ ಬದುಕಿನ ರೀತಿಯನ್ನು ಅರ್ಥೈಸಿಕೊಳ್ಳದೆ ನಾನು ಉಸಿರು‌ ನಿಲ್ಲಿಸಿದ್ದೇನೆ. ಹೀಗೊಂದು ಪತ್ರ ತೆರೆ ಮೆರೆಗೆ ಸರಿದ ಕಲಾವಿದ ಸಾವಿನ ನಂತರ ಪತ್ರಿಕೆಗಳೆಲ್ಲ ಅಚ್ಚಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ