ಕಾಡಿನ ನಡುವೆ ನೆಮ್ಮದಿಯಲ್ಲಿ ಉಸಿರಾಡುತ್ತಿದ್ದವನಿಗೆ ಹೊಸ ಕನಸಿನ ಹೊಸ ಆಲೋಚನೆಗಳನ್ನ ಯಾರು ಬಿತ್ತಿಬಿಟ್ಟರು. ಬದುಕುವ ದಾರಿ ಬದಲಾಗಬೇಕೆಂದುಕೊಂಡು ಕಾಂಕ್ರೀಟ್ ಕಾಡುಗಳ ನಡುವೆ ಪಯಣ ಆರಂಭವಾಯಿತು. ದಿನೇ ದಿನೇ ಪ್ರಸಿದ್ಧಿಯ ಹುಚ್ಚು ತಲೆಗೇರಿತು. ಪ್ರಸಿದ್ಧನಾಗ ಬೇಕೆಂಬ ಆಸೆಯಿಂದ ಹಲವು ವೇದಿಕೆಗಳಿಗೆ ಮುಂದೆ ಅವಕಾಶವನ್ನು ಬೇಡಲಾಯಿತು. ಕೊನೆಗೂ ದೊಡ್ಡದೊಂದು ವೇದಿಕೆಯಲ್ಲಿ ಅವಕಾಶಗಳು ಆಗರ ದೊರೆತು ಎಲ್ಲರೂ ಮೆಚ್ಚುವ ಕ್ರಿಯಾಶೀಲ ವ್ಯಕ್ತಿಯಾಗಿಬಿಟ್ಟ. ಬದುಕಿನ ರೀತಿಗಳು ಬದಲಾಗಿತ್ತು. ಕಾಡಿನ ನಡುವೆ ಉಸಿರಾಡುತ್ತಿದ್ದವನಿಗೆ ವಾಹನಗಳ ಪೇಟೆಗಳ ಜನರ ನಡುವೆ ಬದುಕುವುದು ಅನಿವಾರ್ಯವಾಯಿತು. ಕೈಯಲ್ಲಿ ಓಡಾಡುತ್ತಿದ್ದ ಹಣ ವಿಳಾಸವಿಲ್ಲದೆ ಮಾಯವಾಯಿತು. ಬದುಕು ದುಸ್ತರವಾಯಿತು. ಸಾವು ಆತ್ಮೀಯನಾಗಲಾರಂಭಿಸಿತು. ತಮ್ಮ ಪ್ರಸಿದ್ಧಿಯನ್ನು ಹೆಚ್ಚಿಕೊಳ್ಳುವುದಕ್ಕೆ ವೇದಿಕೆಯ ಮೇಲೆ ಅವಕಾಶಗಳನ್ನ ನೀಡುತ್ತಿದ್ದವರು ಮಾಯವಾಗಿ ಬಿಟ್ಟರು. ಕಾಡು ಮರೆತವನನ್ನ ನಾಡು ಮರೆಯ ತೊಡಗಿತು, ಹೆಸರಿಲ್ಲದೆ ಹಣವಿಲ್ಲದೆ ಬದುಕಿಲ್ಲ ಎಂದುಕೊಂಡು ಸಾವಿನ ಅರಮನೆಯ ಕಡೆಗೆ ಪಯಣ ಹೊರಟಿತು. ಅಲ್ಲಿಗೆ ತಲುಪಿಯು ಆಗಿತ್ತು. ಸತ್ತವನು ದೊಡ್ಡವರಿಗೆ ಸುದ್ದಿ ಅಷ್ಟೇ, ಸತ್ತವನ ಮನೆಗೆ ಸೂತಕವಷ್ಟೇ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!