ಕವಿ ಕವಿಯದಿರು
ಕರಿಯ ಮೋಡವಾಗಿ
ಬರೆದುದೆಲ್ಲವನೂ
ಓದಬೇಕೆಂದೇನಿಲ್ಲ !
*
ಕವಿ ಬರೆದೊಡನೆ
ಕವಿತೆಯಾಗದೆಂದು
ಓದುಗರಿದ್ದರೇನೆ
ಸವಿಯಾಗುವುದೆಂದು !
*
ಜೀತ ಮುಕ್ತ ಭಾರತ
ಹೇಳಿದನು ನಾಯಕ
ಅವನ ಮನೆಯಲ್ಲೆ
ಅಂಥವರು ಇಹರು !
*
ವಾಸ್ತವ
ಕಾಲ
ಬದಲಾಗದು
ಜನ
ಬದಲಾಗುತ್ತಾರೆ !
ಹೊಗಳಿದರೆ
ಮಣೆ ,
ತೆಗಳಿದರೆ ?
ಕೆರೆಮಣೆಯಂತೆ
ವರ್ತಿಸುತ್ತಿದ್ದಾರೆ
ಛಲವಾದಿಯೆ !!
*
ಒಂದು ಗಝಲ್
ಬಿರುಕು ಮೂಡದಿರಲಿ ಸಖಿಯೆ ನನ್ನ ನಿನ್ನ ನಡುವೆ
ದ್ವೇಷ ಕಾಣದಿರಲಿ ಸಖಿಯೆ ನನ್ನ ನಿನ್ನ ನಡುವೆ
ಹುಟ್ಟು ಸಾವು ಕೈಯಲುಂಟೆ ನೋವ ಏಕೆ ಬಯಸುವೆ
ಕೆಡುಕು ಬಾರದಿರಲಿ ಸಖಿಯೆ ನನ್ನ ನಿನ್ನ ನಡುವೆ
ಯಾರಿಗಿರದ ಸ್ನೇಹವಿದುವು ಬಾಳ ಪಥದ ನಡೆಯಲಿ
ಪ್ರೀತಿ ಸೋರದಿರಲಿ ಸಖಿಯೆ ನನ್ನ ನಿನ್ನ ನಡುವೆ
ಜೀವ ನಯನ ಭಾವ ತನನ ಹೊಸಿಲ ಒಳಗೆ ಸೇರುವ
ಪ್ರೇಮ ದೂರದಿರಲಿ ಸಖಿಯೆ ನನ್ನ ನಿನ್ನ ನಡುವೆ
ಹರಿಯ ಒಲವು ಹರನ ಛಲವು ನಮಗೆ ಸಿಗಲಿ ಈಶಾ
ಮಧುವು ಜಾರದಿರಲಿ ಸಖಿಯೆ ನನ್ನ ನಿನ್ನ ನಡುವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!