ಇದು ಸ್ವಲ್ಪ ಓವರ್ ಆಗಿಲ್ವಾ? ರಸ್ತೆ ಬದಿಯಲ್ಲಿದ್ದ ಒಂದು ಮರವನ್ನ ಕಡಿದುರುಳಿಸಿದ್ದಕ್ಕೆ ಆ ವ್ಯಕ್ತಿ ಕಣ್ಣೀರುಳಿಸುತ್ತಿದ್ದಾನೆ, ಮರವನ್ನ ಕಡಿದವರಿಗೆ ಶಾಪ ಹಾಕುತ್ತಿದ್ದಾನೆ, ಇಷ್ಟೆಲ್ಲ ಮಾಡುವ ಅವಶ್ಯಕತೆ ಏನಿದೆ. ಒಂದು ಮರ ತಾನೆ ಇನ್ನು ಕೋಟಿಗಟ್ಟಲೆ ಮರ ಈ ಭೂಮಿ ಮೇಲೆ ಇದ್ದವಲ್ಲಾ ಹಾಗೆ ಹೇಳುವುದಕ್ಕೆ ಆಗುವುದಿಲ್ಲ ಆ ಮರದಲ್ಲಿ ಹಲವು ಪ್ರಾಣಿ ಪಕ್ಷಿಗಳು ಆಶ್ರಯವನ್ನು ಬಯಸಿದ್ದವು, ಹಕ್ಕಿಗಳು ಗೂಡು ಕಟ್ಟಿಕೊಂಡಿದ್ದವು. ನೆರಳಿನಿಂದ ನೆಲ ತಂಪಾಗಿತ್ತು, ಬೇರುಗಳು ಭೂಮಿಯ ಒಳಗೆ ಇಳಿದು ನೆಲವನ್ನ ಕಾಯುತ್ತಿದ್ದವು, ಹಣ್ಣುಗಳು ಒಂದಷ್ಟು ಜನರ ಹೊಟ್ಟೆ ಸೇರುತ್ತಿದ್ದವು ,ಇನ್ನೊಂದು ಸಾವಿರಗಟ್ಟಲೆ ಮರಗಳನ್ನ ಬೆಳೆಸುವುದಕ್ಕೆ ಕಾರಣವಾಗಲಿದ್ದವು ,ಅದ್ಭುತವಾದ ಪರಿಸರ ಈ ಒಂದು ಮರದಿಂದ ರೂಪಗೊಳ್ಳುವುದರಲ್ಲಿತ್ತು, ಅದನ್ನ ನಾಶ ಮಾಡಿದ್ದ ಕಾರಣಕ್ಕೆ ಅವನು ಅಳುತ್ತಿದ್ದಾನೆ, ಅವನ ಮನಸ್ಸಿನೊಳಗೆ ಮೂಡಿದ ಭಾವನೆ ನಮ್ಮೆದೆಗೆ ದಾಖಲಾಗದೆ ಇರೋದು ವಿಪರ್ಯಾಸ ಅಲ್ವೇ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!