ವಿಚಿತ್ರ ಮಾತುಗಳ ಮನುಷ್ಯರ ವರ್ತನೆಗಳಿಗೆ ಧನ್ಯವಾದಗಳು 

ಆಚಾರ ವಿಚಾರಗಳ ಜೊತೆಯೇ ಕನಸುಗಳಿಗೆ ಧನ್ಯವಾದಗಳು 

 

ಬೆಲೆ ಕೊಡದ ಜನರ ನಡುವಿನಿಂದ ದೂರ ಸರಿಯಬೇಕಲ್ಲವೇ

ವರ್ತಮಾನದ ಎಡೆಗೆ ನಡೆವ ಹೃದಯಗಳಿಗೆ ಧನ್ಯವಾದಗಳು 

 

ವಾದ ವಿವಾದ ಮನುಷ್ಯರ ಬದುಕಿನ ಒಂದು ಭಾಗವಲ್ಲವೇ

ಮನವಿಗೂ ಸ್ಪಂದಿಸದವರ ನನಸುಗಳಿಗೆ ಧನ್ಯವಾದಗಳು 

 

ಜಗತ್ತಿನ ಒಟ್ಟಿಗೆ ಇರುವ ಜೀವಕೋಟಿಗೆ ಇಂದು ಏನಾಗಿದೆ 

ರಕ್ತ ಮೂಳೆ ಮಾಂಸದ ಒಳ ಮನಸ್ಸುಗಳಿಗೆ ಧನ್ಯವಾದಗಳು 

 

ಜೀವವಿದ್ದರೂ ಈಗಿನವರು ಸತ್ತವರಂತೆ ವರ್ತಿಸುವರಲ್ಲ ಈಶಾ

ತಪ್ಪುಗಳ ಕ್ಷಮಿಸುವ ಬಹಳಷ್ಟು ಒಲುಮೆಗಳಿಗೆ ಧನ್ಯವಾದಗಳು 

 

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ