ಗಟ್ಟಿಯ ನಾಲ್ಕು ಕಂಬಗಳನ್ನು ಹಾಕಿ ಚಪ್ಪರ ಒಂದನ್ನ ಏರಿಸಬೇಕು. ಇಲ್ಲಿಯವರೆಗೂ ಹಾಕಿರುವಂತದ್ದಲ್ಲ. ವಿಶೇಷವಾಗಿ ನಾನೇ ಮುಂದೆ ನಿಂತು ಹಾಕಿರುವಂತಹ ಚಪ್ಪರ ಅದಾಗಬೇಕು. ಉಳಿದೆಲ್ಲ ಚಪ್ಪರದ ಕೆಳಗೆ ಸೇರಿದವರು ತಾವು ಸೇರಿದ ಉದ್ದೇಶ ಬಿಟ್ಟು ಇನ್ನೊಬ್ಬರ ತೇಜೋವಧೆ ಮಾಡುವುದಕ್ಕೆ ಸೇರಿರುತ್ತಾರೆ. ಆದರೆ ನನ್ನ ಚಪ್ಪರದ ಕೆಳಗೆ ಸೇರಿರುವ ಎಲ್ಲರೂ ಕೂಡ ಅವರವರ ಬದುಕಿನ ಭವಿಷ್ಯದ ಬಗ್ಗೆ ಯೋಚಿಸಬೇಕು, ಎಲ್ಲರನ್ನು ಒಮ್ಮತದಿಂದ ಪ್ರೀತಿಸುವಂಥವರಾಗಬೇಕು. ಆ ಚಪ್ಪರದ ಆಡಿಗೆ ಬರುವ ಅವರೆಲ್ಲರೂ ಕೂಡ ಅಸೂಯೆ ಮೋಸ ಎಲ್ಲವನ್ನು ತೊರೆದು ಪ್ರೀತಿಯನ್ನು ಹೊತ್ತೊಯ್ಯಬೇಕು. ಜಾತಿ ಮತ ದ್ವೇಷಗಳೆಲ್ಲವನ್ನು ಬದುಗಿರಿಸಿಅವರಿಗಾಗಿ ಬದುಕುವಂತವರಾಗಬೇಕು. ರಾಜಕೀಯ ತೊರೆದು ಬದುಕು ಕಟ್ಟುವಂತಹ ಜನ ಅಲ್ಲಿ ಸೇರಬೇಕು. ಒಟ್ಟಿನಲ್ಲಿ ಜೊತೆ ಸೇರಿ ಮುನ್ನಡೆಯುವ ಸನ್ಮನಸ್ಸುಗಳು ಒಟ್ಟು ಸೇರುವಂತಹ ಚಪ್ಪರವೊಂದನ್ನ ಹಾಕಬೇಕು. ಗುಂಡಿ ತೆಗೆದು ಕಂಬ ನೆಡುವ ಕೆಲಸ ಮಾಡಿದ್ದೇನೆ. ಆದರೆ ಚಪ್ಪರವೆಲ್ಲೋ ಸಿಗುತ್ತಿಲ್ಲ ನಿಮ್ಮಲ್ಲಿದ್ದರೆ ಒಂದು ಸಹಾಯ ಮಾಡಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!