ಅಮ್ಮ ನನ್ನನ್ನ ಮುದ್ದು ಬಂಗಾರ, ಚಿನ್ನ, ನಾನು ನಿನ್ನ ಪ್ರೀತಿಯ ಮಗ ಅಂತ ಕೂಡ ಹೇಳ್ತಿಯ. ಆದರೆ ಅದ್ಯಾವುದೋ ಹಬ್ಬ ಬಂದಿದ್ಯಲ್ಲ ಆ ಕೃಷ್ಣ ಜನ್ಮಾಷ್ಟಮಿ ಅದಕ್ಕೆ ಯಾಕೆ ನನ್ನನ್ನು ಕೃಷ್ಣನ ತರ ಸಿಂಗರಿಸಿಲ್ಲ. ಅಲ್ಲಿ ನಮ್ಮ ಶಾಲೆ ಪಕ್ಕ ಬೇರೆ ಬೇರೆ ಮಕ್ಕಳನ್ನು ಕೃಷ್ಣನ ವೇಷ ಹಾಕ್ಸಿ ವೇದಿಕೆ ಮೇಲೆ ಕರೆದು ಬಹುಮಾನ ಕೂಡ ಕೊಡ್ತಾರೆ. ನನ್ನನ್ನ ಒಂದು ದಿನವೂ ನೀನು ವೇಷ ಹಾಕ್ದೆ ಹಾಗೆ ಕರೆದುಕೊಂಡು ಹೋಗಿಲ್ಲ. ಇಲ್ಲ ಮಗು ನೀನು ಯಾವತ್ತಿದ್ರೂ ನೋಡೋಕೆ ಚೆಂದಾನೆ .ಎಲ್ಲ ಮಕ್ಕಳು ಕೃಷ್ಣನ ಅಂಶ. ನೋಡುವುದಕ್ಕೆ ಮುದ್ದಾಗಿ ಕಾಣುತ್ತಾರೆ. ಅವರ ನಡುವೆ ಸ್ಪರ್ಧೆಗಳನ್ನು ತಂದಿಟ್ಟು ಗೆದ್ದು ಸಾಧಿಸುವುದಕ್ಕೆ ಏನೂ ಇಲ್ಲ. ಹಾಗಾಗಿ ನಾನಂತೂ ಆ ಸ್ಪರ್ಧೆಗೆ ನಿನ್ನನ್ನ ಕಳಿಸುವುದಿಲ್ಲ.ಸ್ಪರ್ಧೆಯ ನಡುವೆ ಮಗ್ದತೆ ಮಾಯಾವಾಗಬಾರದು ಅಲ್ವಾ?
ಮಗು ಮನಸ್ಸಿಲ್ಲದೆ ಇದ್ರೂ ಅಮ್ಮನ ಮಾತನ್ನು ಒಪ್ಪಿಕೊಂಡಿತ್ತು .ಆದರೂ ಕಣ್ಣ ಮುಂದೆ ಕಾಣುವ ಸ್ಪರ್ಧೆಗಳು ನಡೆಯುವ ವಿಷಯಗಳು ಮಗುವಿನ ಮನಸನ್ನ ಪ್ರಶ್ನೆಗಳ ಒಳಗೆ ಇಳಿಸಿಬಿಟ್ಟಿತ್ತು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!