ನಾನು ಕಾಯ್ತಾ ಇದ್ದೇನೆ ಆ ದಿನ ನಿನಗೆ ಬರಲೇಬೇಕು. ನಿನ್ನ ಸ್ವಾಭಿಮಾನ ಇದೆಯಲ್ಲ ಸ್ವಾಭಿಮಾನದ ಕಪಾಳಕ್ಕೆ ಎರಡು ಬಾರಿಸುವಂತಹ ದಿನ. ನಿನ್ನ ಕಣ್ಣ ಮುಂದೆ ಬಂದಾಗ ನೀನು ಖಂಡಿತ ಬದಲಾಗ್ತೀಯಾ ಏನಾದರೂ ಹೊಸತನ ಮಾಡಬೇಕು ಅಂತ ಅಂದುಕೊಳ್ಳುತ್ತೀಯಾ. ಯಾವತ್ತೂ ನಿನ್ನ ಸ್ವಾಭಿಮಾನಕ್ಕೆ ಏನೂ ತೊಂದರೆ ಆಗುವುದಿಲ್ಲವೋ ಅಲ್ಲಿಯವರೆಗೂ ನೀನು ಯಾವುದೇ ಹೊಸ ಹೆಜ್ಜೆಯನ್ನು ಇಡುವುದಿಲ್ಲ. ಹೊಸತನ್ನ ಪ್ರಯತ್ನ ಪಡುವುದಿಲ್ಲ. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಮಾತ್ರ ವ್ಯಕ್ತಿ ಜಾಗ್ರತನಾಗುತ್ತಾನೆ. ಇದ್ದದ್ದಕ್ಕಿಂತ ಬದಲಾವಣೆ ಬೇಕು ಅಂತ ಅಂದುಕೊಳ್ಳುತ್ತಾನೆ. ಅವತ್ತೂ ಆತ ಹೊಸ ದಾರಿಯನ್ನು ಹುಡುಕುತ್ತಾನೆ. ಹಾಗಾಗಿ ನಿನ್ನ ಸ್ವಾಭಿಮಾನಕ್ಕೆ ಪೆಟ್ಟು ಬೀಳಲೇಬೇಕು. ಆ ದಿನವನ್ನು ನಾನು ಕಾಯ್ತಾ ಇದ್ದೇನೆ. ಪ್ರತಿದಿನವೂ ಭಗವಂತನಲ್ಲಿ ಅದನ್ನೇ ಬಿಡುತ್ತಿದ್ದೇನೆ ಹೀಗೆಂದ ನನ್ನ ಗೆಳೆಯನ ಮಾತು ನನಗೊಂದು ಸಲಾ ದಿಗಿಲು ಹುಟ್ಟಿಸಿತು. ಆದರೂ ಆತನ ಮಾತಿನಲ್ಲಿ ಸತ್ಯ ಇದೆ ಅನ್ನಿಸ್ತು ಭಗವಂತನಲ್ಲೂ ಅದನ್ನೇ ಕೇಳಿಕೊಂಡೆ ಆತನ ಪ್ರಾರ್ಥನೆಯನ್ನು ಫಲಿಸಿ ಬಿಡು ಅಂತ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ