ನಾವೆಲ್ಲರೂ
ಒಂದೇ
ಎನ್ನುವ
ಭಾರತದಲ್ಲಿ
ಎಷ್ಟೊಂದು
ಜಾತಿಗಳು ?
ಪಂಗಡಗಳು
ಒಳ
ಪಂಗಡಗಳು !
ಅವರವರ
ಒಳಗೆ
ಕಚ್ಚಾಟ ಹುಚ್ಚಾಟ
ಹೊಡೆದಾಟ ಬಡಿದಾಟ
ತಿಳಿದದ್ದೇ
ಮಾಧ್ಯಮಗಳಿದ !
***
ಇಂದಿನ
ಮಾಫಿಯಾಗಳಲ್ಲಿ
ಶಿಕ್ಷಣ
ಕ್ಷೇತ್ರವೂ ಒಂದು !
ಇದರ ನೆರಳಿನಲ್ಲಿಯೇ
ಉಳಿದೆಲ್ಲವೂ
ತಮ್ಮ ಜಾಲವನ್ನು
ಹರಡಿಕೊಂಡಿದೆ !!
*
ಮುಕ್ತಕ
ಹರನ ನೆನೆ ಮನವಿಂದು ಭೂತಗಣ ಬರದೆಂದು
ಧರೆಯೊಳಗೆ ಇರಬಹುದು ಸಂತೋಷದಿಂದ|
ನರನೆನುವ ಭಾವದೊಳು ಜೀವನವ ಸಾಗಿಸುತ
ಪರರಲ್ಲಿ ಒಲವಿರಲಿ -- ಛಲವಾದಿಯೆ||
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!