ನಮ್ಮೆಲ್ಲರ ನಡುವೆ ಇಂಥವರು ಸುಮಾರ್ ಜನ ಇರ್ತಾರೆ. ನಿಮ್ಮನ್ನು ಅಡಿಯಿಂದ ಮುಡಿಯವರೆಗೂ ದ್ವೇಷಿಸ್ತಾ ಇರ್ತಾರೆ. ಅದಕ್ಕೆ ಸ್ಪಷ್ಟ ಕಾರಣ ಇರ್ಲೇಬೇಕು ಅಂತೇನಿಲ್ಲ. ನಿಮ್ಗೂ ಆ ಕಾರಣ ಮೊದಲೇ ಗೊತ್ತಿರಲ್ಲ. ಅವರಿಗೆ ನಿಮ್ಮ ಪ್ರತಿಯೊಂದು ಮಾತೂ ಆಡಂಬರ ಅನ್ನಿಸುತ್ತೆ, ನೀವಿಡುವ ಒಂದೊಂದು ಹೆಜ್ಜೆಯೂ ಕೃತಕ ಅನ್ನಿಸುತ್ತೆ. ಅವಕಾಶ ಸಿಕ್ಕಾಗ್ಲೆಲ್ಲಾ ಕುಹಕವಾಡ್ತಾರೆ.. ಬೆನ್ನ ಹಿಂದೆ ಅದ್ಬುತವಾಗಿ ವ್ಯಂಗ್ಯವಾಡ್ತಾರೆ... ಅವರೆಲ್ಲರೂ ನಿಮಗೆ ಗೊತ್ತಿರೋರೆ ಆಗಿರ್ಬೇಕಿಲ್ಲ. They would have not stepped a single day in your shoes. ನಿಮ್ಮ ಜೀವನದ ಏರಿಳಿತಗಳ ಕಾಲಿಂಚೂ ಅರಿವಿಲ್ಲದಿದ್ದರೂ, ನೀವು ಸವೆಸಿದ ಹಾದಿಗಳ ಅಂದಾಜೇ ಇಲ್ಲದಿದ್ದರೂ ನಿಮ್ಮನ್ನು ನಿಷ್ಠೆಯಿಂದ ದ್ವೇಷಿಸ್ತಾರೆ.
ಪಾಪ.. ಅಂಥವರು ನಿಜಕ್ಕೂ ಅಮಾಯಕರು...ಜೀವನದಲ್ಲಿ ಅಪಾರ ಕನಸುಗಳನ್ನು ಕಂಡು ಏನನ್ನೂ ಪಡೆಯಲಾಗದೆ ಪರಿತಪಿಸುವವರು. ಸಾಧಾರಣವಾಗಿ ಅವರಿಗೆ ಯಾರ ಏಳ್ಗೆಯೂ ಸಹನೀಯವಲ್ಲ.. "I want to do that, but how" ಅನ್ನುವ ಸುಳಿಯಲ್ಲೇ ಸಿಕ್ಕಿ ಒದ್ದಾಡಿಬಿಟ್ಟಿರ್ತಾರೆ.. ಅಸಂಖ್ಯ ಜನರಿಂದ ತಿರಸ್ಕೃತಗೊಂಡಿರ್ತಾರೆ. They are dissatisfied with themselves! ನೀವೂ ಅವರನ್ನು ದ್ವೇಷಿಸುವ ಅವಶ್ಯಕತೆ ಖಂಡಿತಾ ಇಲ್ಲ.. ಅವರಿಗಾಗಿ ಒಂದಿಷ್ಟು ಮರುಕ ಪಟ್ಟುಬಿಡಿ. ಸಾಧ್ಯವಾದರೆ ಅಂಥವರನ್ನು ಗುರುತಿಸಿ ಬೆಳೆಯಲು ಸಹಾಯ ಮಾಡಿ. ನಿಮ್ಮ ಪ್ರತಿ ದಿನದ ಪ್ರಾರ್ಥನೆಯಲಿ ಅವರನ್ನೂ ಸೇರಿಸಿಕೊಂಡುಬಿಡಿ....
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!