ವಯಸ್ಸೇನು ತುಂಬಾ ದೊಡ್ಡದಲ್ಲ. ಶಿಕ್ಷಣ ಪಡೆಯೋದಕ್ಕೆ ಸರಿಯಾದ ಕಾಲಘಟ್ಟ. ಅಲ್ಲಿ ಕಾರ್ತಿಕನಿಗೆ ಅಭಿವೃದ್ಧಿಯೊಂದಿಗೆ ಸಹವಾಸ ಬೆಳೆಯಿತು. ಬದುಕಿನ ದಾರಿ ಗಟ್ಟಿಯಾಯಿತು. ಸರಿಯಾದ ಮಾರ್ಗದಲ್ಲಿ ಹೋದಹಾಗೆ ಜೊತೆ ಸೇರಿದವರಿಗೆ ತಾವು ಎಲ್ಲರಿಗಿಂತ ವಿಭಿನ್ನವಾಗಿರಬೇಕು ಅಂತ ಆಸೆ ಹುಟ್ಟಿತು. ಕೈಯಲ್ಲೊಂದು ಸಿಗರೇಟು ಮಿನುಗುದಕ್ಕೆ ಆರಂಭವಾಯಿತು. ಕೆಲವೊಂದು ಮಧ್ಯಪಾನ ಕೇಂದ್ರಗಳು ಆಗಾಗ ಹೋಗಿ ಬರುವ ತಾಣಗಳಾದವು. ಸಂಭ್ರಮಕ್ಕೂ ಖುಷಿಗೂ ಮನಸ್ಸಿನಲ್ಲಿ ಏನೂ ಯೋಚನೆ ಇಲ್ಲವಾದರೂ ಕೂಡ ಮಧ್ಯಪಾನ ಅದೊಂದು ಹವ್ಯಾಸವಾಯಿತು. ಅಲ್ಲಿ ಬದುಕಿನ ಯೋಚನೆಗಳ ಬಗ್ಗೆ ಮಾತನಾಡುವುದಕ್ಕೆ ಒಳ್ಳೆಯ ಸ್ಥಳ ಅನ್ನುವ ಯೋಚನೆ ಮನಸಲ್ಲಿ ಮೂಡಿತು. ಎರಡಿದ್ದ ಬಳಗ ಮೂರು ನಾಲ್ಕು ಹತ್ತರವರೆಗೆ ಬೆಳೆದು ನಿಲ್ತಾ ಹೋಯಿತು. ದೇಹದೊಳಗೆ ಇಳಿದ ಮಧ್ಯ ಏನೆಲ್ಲ ಕರಾಮತ್ತು ಮಾಡಬಹುದು ಎಲ್ಲವನ್ನು ಪ್ರತಿದಿನವೂ ಮಾಡುವುದಕ್ಕೆ ಆರಂಭಿಸುತ್ತಿದೆ. ಆಸೆಗಳಿದೆ ಕನಸುಗಳಿದೆ ಜವಾಬ್ದಾರಿಗಳಿದೆ ಇವೆಲ್ಲವೂ ಕೂಡ ಹೊಟ್ಟೆಯೊಳಗಿನ ವೇಷ ಮರೆಸಿ ಬಂದ ಭೂತದ ಬಗ್ಗೆ ಅವನಿಗಿನ್ನು ಅರ್ಥವಾಗಿಲ್ಲ. ಮುಂದೊಂದು ದಿನ ಸಾಧಿಸುವುದಕ್ಕೆ ಹೆಜ್ಜೆ ಇಟ್ಟಾಗ ದೇಹದೊಳಗೆ ಸುಡುವಿಕೆ ಆರಂಭವಾಗುತ್ತದೆ. ಸ್ಮಶಾನ ಬೇಗ ಕರೆಯುತ್ತದೆ. ನಂಬಿಕೊಂಡವರು ತಲೆಯ ಮೇಲೆ ಕೈ ಹೊತ್ತು ಸುಮ್ಮನೆ ಆಕಾಶ ನೋಡುತ್ತಾರೆ. ಕಣ್ಣೀರು ಬದುಕಾಗುತ್ತದೆ ತಿಳಿದವರು ಹೇಳಿದರು ಕೂಡ ಕಿವಿಯೊಳಗೆ ಕೇಳಿಕೊಂಡು ಮತ್ತದೇ ಕೆಲಸವನ್ನ ಮುಂದುವರಿಸಿದ್ದಾನೆ... ಭಗವಂತನೇ ದಾರಿ ತೋರಿಸಬೇಕಷ್ಟೇ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ