ಅಯ್ಯೋ ಮತ ಪಡೆದುಕೊಂಡು ಮೇಲೆ ಕುಳಿತವರೇ ವಾರಕ್ಕೊಂದು ಸಲ ನಮ್ಮೂರಿನಲ್ಲಿ ಓಡಾಡಿ, ನಿಮ್ಮದೇ ಗಾಡಿಯಲ್ಲಿ ಅಲ್ಲ, ನಾವು ಓಡಾಡುವ ಬಸ್ಸು ರಿಕ್ಷಾಗಳಲ್ಲಿ , ಪ್ರತೀ ಗಲ್ಲಿಯನ್ನು ತಿರುಗಿ, ಹೇಗೂ ನಿಮಗೆ ಓಡಾಟಕ್ಕೆ ಇಂತಿಷ್ಟು ದುಡ್ಡು ಕೊಡ್ತಾರಲ್ವಾ? ಆಗಾಗ ಪೋನಿನಲ್ಲಿ ಮಾಹಿತಿ ಪಡೆದುಕೊಳ್ಳಿ ಅದಕ್ಕೂ ಹಣ ನಮ್ಮಿಂದಲೇ ಪಡ್ಕೋತಿರಲ್ವ?, ನೀವು ನಮ್ಮ ಸಮಸ್ಯೆ ಆಲಿಸುವುದಕ್ಕೆ ಬರುವುದು ಕಡಿಮೆ ಆದರೂ ಕೆಲವೊಂದು ಕಾರ್ಯಕ್ರಮಗಳಿಗಾದರೂ ನಮ್ಮೂರಿನಿಂದಲೇ ಹಾದು ಹೋಗಿ. ನಿಮ್ಮಲ್ಲಿ ವಿಭಾಗ ಮಾಡಿಕೊಂಡು ವಿಂಗಡನೆ ಮಾಡಿ ತಿರುಗಾಟ ನಡೆಸಿ, ನೀವು ಬರುವ ಸುದ್ದಿ ಗೊತ್ತಾದರೆ ನಮ್ಮೂರಿನ ರಸ್ತೆಗಳು ಗಟ್ಟಿಯಾಗುತ್ತವೆ, ಗುಂಡಿಗಳು ಮಾಯವಾಗುತ್ತವೆ, ನೀರು ಚರಂಡಿಯಲ್ಲಿಯೇ ಹರಿಯುತ್ತದೆ. ಇದೊಂದು ಕೆಲಸ ಮಾಡಿಕೊಡಿ, ನೀವು ಬೇರೆ ಬೇರೆ ಕಡೆ ಉದ್ಘಾಟನೆಯಲ್ಲಿ ತೊಡಗಿಕೊಂಡಿದ್ದರೂ ಇದೊಂದು ಕೆಲಸವನ್ನ ನಿಲ್ಲಿಸಬೇಡಿ. ಯಾಕೆಂದರೆ ಕಳೆದುಕೊಂಡಿರುವುದು ನಾವು ನೀವಲ್ಲ. ನೀವು ಮರೆಯುತ್ತೀರಾ ನಾವಲ್ಲ. ಅಮ್ಮ ನಾಳೆ ಹಲ್ವ ಮಾಡುವುದಕ್ಕೆಂದೇ ತಂದಿಟ್ಟ ಕ್ಯಾರೆಟ್ ಹಾಗೇ ಇದೆ.ಆದರೆ ಅಮ್ಮ ಇಲ್ಲ... ಪ್ಲೀಸ್ ಇದೊಂದು ಮನವಿ ನಡೆಸಿಕೊಡಿ... ಮಗುವಿನ ಪತ್ರ ಅಂಚೆ ಕಛೇರಿ ದಾಟಿ ನಾಯಕರ ಬಳಿ ತೆರಳಿತ್ತು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!