ಶ್ರಮಜೀವಿಗಳ ಮೇಲೆಯೆಯಿಂದು ಎರಗುವಿಯೇನು ಪ್ರಜಾಪ್ರಭುತ್ವ
ಹೊಟ್ಟೆ ತುಂಬಿದವರ ನಡುವೆಯೇ ಸೊರಗುವಿಯೇನು ಪ್ರಜಾಪ್ರಭುತ್ವ
ಬೇಟೆಗಾರರ ಬಾಣಕ್ಕಿಂದು ಬಡಜೀವಿಗಳು ಬಲಿಯಾಗಿವೆ ನೋಡು
ಹಸಿವಿನಾಳವ ಹುಡುಕದೆಯೇ ಮಿನುಗುವಿಯೇನು ಪ್ರಜಾಪ್ರಭುತ್ವ
ದುಡ್ಡಿರುವವನೆ ಜಗದೊಡೆಯನೆಂದು ಹೇಳುವವರೆಲ್ಲರೂ ಯಾಕೆ
ಪ್ರೀತಿಯಿರದವರ ನೋವಿಗೆಲ್ಲ ಕೊರಗುವಿಯೇನು ಪ್ರಜಾಪ್ರಭುತ್ವ
ಅಜ್ಞಾನದ ಕತ್ತಲೆಯ ಜ್ಞಾನವನು ಯಾವುದಕ್ಕಾಗಿ ಪಡೆಯುತಿಹರೋ
ಮುಳುಗದವರಿಗಾಗಿ ಮತ್ತೊಮ್ಮೆ ಮರುಗುವಿಯೇನು ಪ್ರಜಾಪ್ರಭುತ್ವ
ಚಲಿಸುತಿರುವ ನೌಕೆಯೆಂಬ ಬಾಳಿನೊಲುಮೆ ಹೀಗೆಯಿರುವುದೇ ಈಶಾ
ವ್ಯವಸ್ಥೆಯೊಳಗಿನ ಜಾಣತನದೊಳಗೆ ಕರಗುವಿಯೇನು ಪ್ರಜಾಪ್ರಭುತ್ವ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!