ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿಯ "ವಿಪಶ್ಯನ ವಾರ್ತೆ".

ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿ ಟ್ರಸ್ಟ್ ಕಳೆದೊಂದು ದಶಕದಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ವಿಪಶ್ಯನ ವಾರ್ತೆ". ಬೆಂಗಳೂರು ಬನಶಂಕರಿ ೨ನೇ ಹಂತದ ೩೦ನೇ ಅಡ್ಡರಸ್ತೆಯ ಕಟ್ಟಡವೊಂದರಲ್ಲಿ ಕಚೇರಿ ಹೊಂದಿರುವ ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿಯು ೨೦೧೫ರ ಮೇ ತಿಂಗಳಲ್ಲಿ "ವಿಪಶ್ಯನ ವಾರ್ತೆ" ಮಾಸಪತ್ರಿಕೆಯನ್ನು ಆರಂಭಿಸಿತು.

ಜಿ. ಟಿ.  ಗೋವಿಂದಪ್ಪ ಅವರು ಸಂಪಾದಕರು. ಶ್ರೀಮತಿ ಆರ್. ಚಂದ್ರಮತಿ ಪ್ರಕಾಶಕರು. ಬಿ. ಪ್ರದೀಪ ಕುಮಾರ್ ಪ್ರಕಾಶಕರು. ದಾವಣಗೆರೆ ಕೆ.ಹೆಚ್.ಬಿ. ಕಾಲೋನಿಯ ಐರಣಿ ಆಫ್ ಸೆಟ್ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ನಾಲ್ಕು ಪುಟಗಳ ವಿಪಶ್ಯನ ವಾರ್ತೆ ಮಾಸಪತ್ರಿಕೆಯ ವಾರ್ಷಿಕ ಚಂದಾ ಮೊತ್ತ ೩೦ ರೂಪಾಯಿಗಳು. ಆಜೀವ ಚಂದಾ ಮೊತ್ತ ೫೦೦ ರೂಪಾಯಿಗಳು.

ಬುದ್ಧ ಧಮ್ಮದ ಬೋಧನೆಗಳು, ಚಿಂತನೆಗಳ ವಿಶ್ಲೇಷಣೆಗಳು, ವಿಪಶ್ಯನ ಧ್ಯಾನ ಸಂಬಂಧಿ ಲೇಖನಗಳು, ವಿಪಶ್ಯನ ವಾರ್ತೆಯ ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನಗಳ ಕನ್ನಡ ಅನುವಾದಿತ ಬರೆಹಗಳು, ಪ್ರಧಾನ ವಿಪಶ್ಯನಾಚಾರ್ಯರಾದ ಆಚಾರ್ಯ ಎಸ್. ಎನ್. ಗೋಯಂಕ ಅವರ ವಿಚಾರಗಳ ಅನುವಾದಿತ ಬರೆಹಗಳು, ವಿವಿಧ ಜಿಲ್ಲೆಗಳಲ್ಲಿ ನಡೆಯುವ ವಿಪಶ್ಯನ ಧ್ಯಾನ ಶಿಬಿರಗಳ ಕುರಿತಾದ ಮಾಹಿತಿಗಳು ಇತ್ಯಾದಿಗಳು "ವಿಪಶ್ಯನ ವಾರ್ತೆ"ಯಲ್ಲಿ ಪ್ರಕಟವಾಗುತ್ತವೆ. ವಿಪಶ್ಯನ ವಾರ್ತೆಯಲ್ಲಿ ಇದುವರೆಗೆ ಪ್ರಕಟವಾದ ಎಲ್ಲಾ ಲೇಖನಗಳನ್ನು ಸಂಪಾದಿಸಿ ವಿವಿಧ ಸಂಪುಟಗಳಲ್ಲಿ ಪುಸ್ತಕವಾಗಿಯೂ ಪ್ರಕಟಿಸಲಾಗಿದೆ.

~ ಶ್ರೀರಾಮ ದಿವಾಣ