ಕವಿ ,ದ್ವೇಷವಿರದೆ

ಇದ್ದರದು ಮಾತ್ರವೆ

ಬರಹದ ಬಂಡಿಯು

ಸರಿಯಾಗಿ ಸಾಗೀತು !

*

ಏರಿದವನು

ಇಳಿಯಲೇ

ಬೇಕೆಂಬ

ನೀತಿಯನ್ನು

ಏರಿದವ

ಕಲಿತರೆ

ಒಳಿತು

ಇಲ್ಲದಿರೆ

ಜೀವನವೇ

ಕೊಳೆತು

ಹೋದೀತು

ಚಲವಾದಿಯೆ !

*

ಏರಿದ ಪುಗ್ಗೆಗೆ

ಜಂಭ ಬಂದದ್ದನ್ನು

ಕಂಡು,

ಏರುತ್ತಿರುವ ಪುಗ್ಗೆ;

ತನ್ನ ಕೈಯಲ್ಲಿದ್ದ

ಸೂಜಿಯಿಂದ

ಏರಿದ

ಪುಗ್ಗೆಯನ್ನು

ಚುಚ್ಚಿ

ಬಿಟ್ಟಿತು !

*

ಉರಗ ಬುಸ್ಸ್ ಅಂದಂತೆ ನಾವಿರಬೇಕು

ಜಾಸ್ತಿ ತಂಟೆಯನು ಮಾಡಿದರೆ ಕಚ್ಚಬೇಕು

ಮಾನವೀಯತೆಯ ಜೊತೆಗೆ ಪ್ರೀತಿಯಿರಲಿ

ದ್ವೇಷವು ಯಾವತ್ತಿದ್ದರೂ ಕೊನೆಯಾಗಬೇಕು !

*

ಅಪ್ಪ ಬೆಪ್ಪನಾಗದೆ

ಇದ್ದರದು ಮಾತ್ರವೆ

ಸಂಸಾರ ಬಂಡಿಯದು

ಸರಿಯಾಗಿ ಸಾಗೀತು !

*

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ