ಇತ್ತೀಚಿಗೆ ಊರಿನ ಎಲ್ಲ ವೇದಿಕೆಗಳಲ್ಲೂ ಅವನದೇ ಮಾತು. ಅವನು ಮಾತಿಗಿಳಿದನೆಂದರೆ ಕೇಳುವವರೆಲ್ಲರೂ ತದೇಕಚಿತ್ತದಿಂದ ಅವನ ಮಾತನ್ನೇ ಆಲಿಸುತ್ತಿದ್ದರು. ಅವನ ಮಾತಿನಲ್ಲಿರುವ ನಿಜದ ಜೀವನದ ಘಟನೆಗಳು ಕಣ್ಣಿಗೆ ಕಟ್ಟುವಂತೆ ಹೇಳುವ ಚಾಕಚಕ್ಯತೆ ಎಲ್ಲವೂ ಕೂಡ ಕೇಳುಗನ ಮನಸ್ಸಿನೊಳಗೆ ಇಳಿದು ಕಣ್ಣನ್ನ ಒಂದು ಕ್ಷಣವಾದರೂ ಒದ್ದೆ ಮಾಡದೆ ಸುಮ್ಮನಾಗುವುದಿಲ್ಲ. ಆತನಿಗೆ ಆ ಕಾರಣಕ್ಕೆ ಎಲ್ಲ ಕಡೆಗೂ ಸನ್ಮಾನವಾಯಿತು. ಸಮಾನತೆಯ ಸಾರುವ ಶೂರ ಹೀಗೆ ವಿವಿಧ ಬಿರುದುಗಳು ಅವನ ಮನೆಯ ಗೋಡೆಯ ತುಂಬೆಲ್ಲ ರಾರಾಜಿಸುತ್ತಿದ್ದವು. ಆದರೆ ಒಂದು ದಿನವೂ ಆತ ತನ್ನ ಮನೆಯವರನ್ನ ಸಮಾಜಕ್ಕೆ ಪರಿಚಯಿಸಲಿಲ್ಲ ಅವರನ್ನು ಮನೆಯ ಹೊರಗೆ ಕರೆದುಕೊಂಡು ಹೋಗಲಿಲ್ಲ ಯಾರೇ ಮನೆಗೆ ಆಗಮಿಸಿದರೂ ಕೂಡ ಮನೆಯ ಹೆಣ್ಣು ಮಕ್ಕಳು ಅಡಿಗೆ ಕೋಣೆಯೊಳಗೆ ಉಳಿದು ಬಿಟ್ಟಿದ್ದರು. ಅವಕಾಶವಿರಲಿಲ್ಲ ಒಟ್ಟಿನಲ್ಲಿ ಅವರ ಬದುಕು ಮನೆಯೊಳಗೆ ಬಂಧಿಯಾಗಿಬಿಟ್ಟಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!