ನಳಿನಿಗೆ ಅಲ್ಲಿ ಬದುಕುವುದಕ್ಕೆ ಕಷ್ಟವಾಗುತ್ತಿದೆ. ಸರಿಯಾಗಿ ಆಮ್ಲಜನಕ ಸಿಗ್ತಾ ಇಲ್ಲ. ಇಂಗಾಲದ ಪ್ರಮಾಣ ಹೆಚ್ಚಾಗ್ತಾ ಇದೆ. ಬದುಕುವುದಕ್ಕೆ ಆಮ್ಲಜನಕ ತುಂಬಾ ಅವಶ್ಯಕತೆ ಇದೆ. ಆದರೆ ಅವಳ ಸುತ್ತಮುತ್ತ ಕ್ಷಣ ಕ್ಷಣ ಇಂಗಾಲದ ಪ್ರಭಾವ ಹೆಚ್ಚಾಗುತ್ತಿದ್ದೆ. ಕಾರಣ ಅವಳ ಉಸಿರು ಕಟ್ಟುತ್ತಿದೆ, ಬದುಕು ತುಂಬಾ ಕಷ್ಟವೆನಿಸಿದೆ. ಅವಳಿಗೆ ಅವಕಾಶವಿದೆ. ಆಮ್ಲಜನಕವನ್ನು ಹುಡುಕಿ ಹೊರಗಡೆ ಹೋಗಬೇಕು ಇಲ್ಲವಾದರೆ ಇದ್ದ ಸ್ಥಳದಲ್ಲೇ ಆಮ್ಲಜನಕವನ್ನು ಸೃಷ್ಟಿಸಿಕೊಳ್ಳುವ ಗಿಡಗಳನ್ನು ಹೆಚ್ಚು ಬೆಳೆಸಬೇಕು. ಈ ಎರಡು ಅವಕಾಶಗಳಲ್ಲಿ ಅವಳು ಯಾವುದನ್ನ ಮಾಡಿಕೊಂಡರೂ ಬದುಕುತ್ತಾಳೆ. ಹಾಗಾಗಿ ಈಗ ಎರಡು ಅವಕಾಶಗಳಲ್ಲಿ ಯಾವುದನ್ನ ಆಯ್ದುಕೊಡಬೇಕು ಅನ್ನುವ ಚಿಂತೆಯಲ್ಲಿದ್ದಾಳೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!