ಹಾಗೇ ಓಡುವುದ್ದಕ್ಕೆ ಎಲ್ಲರೂ ನಿಂತಿದ್ದಾರೆ. ಓಟ ಆರಂಭವಾಗಿದೆ. ಓಡುವ ದೂರ ಯಾರಿಗೂ ಅರಿವಿಲ್ಲ. ಎಲ್ಲರೂ ಓಟ ಆರಂಬಿಸಿದ್ದಾರೆ. ಎಲ್ಲರಿಗೂ ಗೆಲುವಿನ ಆಸೆ. ಆ ಕಾರಣಕ್ಕೆ ಓಟದ ಆರಂಭದಲ್ಲಿಯೇ ವೇಗ ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಗೆಲ್ಲಬೇಕು ಅನ್ನೋದು ಒಂದೇ ನಿಲುವು. ತಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳದೆ ಓಟ ಆರಂಭಿಸಿದ್ದಾರೆ. ಕೆಲವರು ಕೆಲವು ಹೆಜ್ಜೆಗಳಲ್ಲಿ ಸೋತು ನಿಂತುಬಿಟ್ಟಿದ್ದಾರೆ, ಕೆಲವರು ಕಿಲೋಮೀಟರ್ ಪ್ರಯಾಣಿಸಿದ್ದಾರೆ ಮುಂದುವರಿಯಕ್ಕಾಗದೆ ಕುಸಿದು ಕುಳಿತ್ತಿದ್ದಾರೆ. ಆದರೆ ಆ ಒಬ್ಬನಿಗೆ ಮಾತ್ರ ತಾನು ತುಂಬಾ ದೂರದವರೆಗೆ ಚಲಿಸಬೇಕು ಓಡಬೇಕು ಅನ್ನೋದರ ಬಗ್ಗೆ ಅರಿವಿತ್ತು. ಆ ಕಾರಣಕ್ಕೆ ಆತ ನಿಧಾನವಾಗಿ ಓಡಿದ. ಆತನ ಹೆಜ್ಜೆಗಳು ಸಮ ಪ್ರಮಾಣದಲ್ಲಿದ್ದವು. ಎಲ್ಲೂ ಕೂಡ ವೇಗವನ್ನ ಹೆಚ್ಚಿಸಿಕೊಳ್ಳದೆ ಶಿಸ್ತಿನಿಂದ ಪ್ರತಿ ಹೆಜ್ಜೆಗಳನ್ನು ಇಡುತ್ತಾ ಹೋದ ಅವನ ದೇಹಕ್ಕೆ ಶಕ್ತಿಯೂ ಸಿಗುತೊಡಗಿತು. ಮುಂದೆ ಹೆಚ್ಚು ದೂರವನ್ನು ತಲುಪುವುದಕ್ಕೆ ಸಾಧ್ಯ ಆಯಿತು. ಕೊನೆಗೆ ಆತನೊಬ್ಬನೇ ಗೆಲುವಿನ ದಡವನ್ನು ತಲುಪಿದವ. ಆತ ಗೆಲುವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿದ್ದು ಆತನ ಶಿಸ್ತೇ ಹೊರತು ವೇಗವಾದ ಓಟವಲ್ಲ... ನಮಗೂ ಒಳ್ಳೆಯ ಪಾಠ ಅಲ್ವಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!