ಬದುಕೇಕೆ ಹೀಗೆ ಅಂತ ವಿದೇಶದಲ್ಲಿ ಕುಳಿತು ಯೋಚಿಸುತ್ತಿದ್ದಾನೆ. ಊರು ಬಿಡಲೇ ಬೇಕಾಗಿತ್ತು. ಶಿಕ್ಷಣವೇನೋ ಮುಗಿದಿತ್ತು. ಆದರೆ ಸಿಗುವ ಕೆಲಸವೋ ಮನೆಯ ಬದಕನ್ನು ನಿಭಾಯಿಸಲು ಸಾದ್ಯವಿರಲಿಲ್ಲ. ಹಾಗಾಗಿ ಊರು ಬಿಡುವ ನಿರ್ಧಾರಕ್ಕೆ ಬಂದಿದ್ದ. ಮನಸ್ಸಿಲ್ಲದಿದ್ದರೂ ಹೊರಡಲೇ ಬೇಕಾಗಿತ್ತು. ಮಾತಿನಲ್ಲಿ ಮನೆಯವರ ಆರೋಗ್ಯ ವಿಚಾರಿಸುತ್ತಾ ಅಪರಿಚಿತ ಊರಿಗೆ ಪರಿಚಿತನಾದ. ಮನೆ ಗಟ್ಟಿಯಾಯಿತು, ತಂಗಿಯ ಮದುವೆಯೂ ಕೂಡಾ. ಆದರೆ ಅವನಿಗೆ ವಿದೇಶ ತೊರೆಯುವ ಹಾಗಿರಲಿಲ್ಲ. ಎಲ್ಲವೂ ಬರಿಯ ಚಿತ್ರದಲ್ಲಿ ನೋಡುವಂತಾಗಿತ್ತು. ವಿದೇಶದಿಂದ ಮತ್ತೆ ಊರಿಗೆ ತೆರಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾದಾಗ ಮತ್ತೆ ಬದುಕು ಸುಂದರವಾಗಬಹುದೆಂದುಕೊಂಡರೂ ಮನೆಯವರಿಗೆ ಸಂಪಾದನೆ ಇನ್ನೂ ಹೆಚ್ಚು ಬೇಕಾಗಿತ್ತು. ಊರಿನ ದುಡಿಮೆಯಿಂದ ಮನೆಯಲ್ಲಿ ಗೌರವ ಸಿಗಲಿಲ್ಲ. ಮತ್ತೆ ಹೊಸತೊಂದು ಊರಿಗೆ ಸಮುದ್ರ ದಾಟಿ ಬಂದಿದ್ದ. ದಿನದ ಶ್ರಮಕ್ಕೆ ಊರಿನಲ್ಲಿ ಬದಲಾವಣೆ ಆಗುತ್ತಿದೆ. ಕಷ್ಟಕ್ಕಾಗುವಾಗ ಇವನ ನೆನಪಾಗುತ್ತದೆ. ಎಲ್ಲರ ಬದುಕು ಸುಂದರವಾಗಿಸೋದ್ದಕ್ಕೆ ಹೊರಟವನ ಬದುಕು ಮೂಲೆಗುಂಪಾಗಿದೆ. ಅವನ ಕನಸು, ಆಸೆಗಳ ಬಗ್ಗೆ ಕೇಳುವರು ಯಾರಿಲ್ಲ. ದುಡ್ಡಿನಿಂದ ಸಿಗುವ ಗೌರವಕ್ಕೆ ಈಗಲೂ ದುಡಿಯುತ್ತಿದ್ದಾನೆ ರಾತ್ರಿ ಹಗಲೆನ್ನದೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!