ಅಲ್ಲಾ ನಿಮ್ಮನ್ನು ಖರೀದಿಸಿ ತಂದದ್ದು ಯಾವ ಕಾರಣಕ್ಕೆ, ನಿಮ್ಮ ಮೇಲೆ ಕುಳಿತು ವಿಶ್ರಾಂತಿಯನ್ನು ಬಯಸಬೇಕು ಅನ್ನುವ ಉದ್ದೇಶವನ್ನಿಟ್ಟುಕೊಂಡು. ಆದರೆ ನೀವು ಮನೆಗೆ ತಲುಪಿದ ಮೇಲೆ ಅದೇ ಕಾರಣಕ್ಕೆ ಬಳಕೆ ಆಗ್ತಾ ಇದ್ದೀರಾ, ಇಲ್ಲ ತಾನೇ. ಕೆಲವರು ಎಲ್ಲೋ ಮೂಲೆಯಲ್ಲಿ ದೂಳು ತಿಂತಾ ಇದ್ದೀರಾ, ಇನ್ನು ಕೆಲವರು ನಿಮ್ಮ ಮೇಲೆ ಬಟ್ಟೆಯನ್ನೋ ಬ್ಯಾಗನ್ನು ಕೈಗೆ ಸಿಕ್ಕ ವಸ್ತುವನ್ನು ನಿಮ್ಮ ಮೇಲೆ ಇಟ್ಟು ತೆರಳುತ್ತಾರೆ. ನಿಮ್ಮ ನಿಜದ ಕೆಲಸ ಯಾರಾದರೂ ವ್ಯಕ್ತಿಯ ಭಾರವನ್ನು ತಮ್ಮ ಮೇಲೆ ಕುಳ್ಳಿರಿಸಿಕೊಳ್ಳುವುದು. ಆದರೆ ಕಾಲಕ್ರಮೇಣದಲ್ಲಿ ನಿಮ್ಮ ಕೆಲಸಗಳೆಲ್ಲವೂ ಬದಲಾಗಿಬಿಟ್ಟಿದೆ. ನಿಮಗೆ ಅದಕ್ಕೆ ಒಂದನಿತೂ ಬೇಸರ ಇಲ್ವಾ ? ಹೀಗೆಂದು ಕುರ್ಚಿಯಲ್ಲಿ ಪ್ರಶ್ನೆಯನ್ನು ಕೇಳಿದೆ. ಅದಕ್ಕೆ ಅದರ ಉತ್ತರ ತುಂಬಾ ಅದ್ಭುತವಾಗಿತ್ತು .ಯಾವುದೇ ರೀತಿಯ ಹಣೆಪಟ್ಟೆಯನ್ನು ನಾವು ಅಂಟಿಸಿಕೊಂಡು ಬಂದವರಲ್ಲ. ಬಂದ ಎಲ್ಲ ಕೆಲಸವನ್ನು ಅದೇ ಶ್ರದ್ಧೆಯಿಂದ ನಿರ್ವಹಿಸುತ್ತೇವೆ. ನಮ್ಮ ಮೇಲೆ ಯಾವುದೆಲ್ಲ ಜವಾಬ್ದಾರಿಗಳನ್ನು ಹೊರಿಸ್ತಾರೋ ಆ ಎಲ್ಲ ಜವಾಬ್ದಾರಿಗಳನ್ನ ತುಂಬಾ ಖುಷಿಯಿಂದ ಮತ್ತು ನಂಬಿಕೆಯಿಂದ ನಿರ್ವಹಿಸಿದ ಕಾರಣ ನಮಗಿನ್ನೂ ಬೆಲೆ ಸಿಕ್ತಾ ಇದೆ . ನಮಗೆ ಗೌರವವಿದೆ ಮತ್ತು ಕೆಲಸವನ್ನು ನಿರ್ವಹಿಸಿದ ತೃಪ್ತಿ ಇದೆ. ಇಷ್ಟು ಸಾಕು... ನಿರ್ಜೀವ ಕುರ್ಚಿಯೇ ಇಷ್ಟು ಬದುಕಿನ ಬಗ್ಗೆ ಅದ್ಭುತ ಮಾತುಗಳನ್ನ ಆಡುವಾಗ ಜೀವವಿರುವ ನಾನು ಕೂಡ ಅಷ್ಟೇ ನಮ್ರತೆಯಿಂದ ಅದನ್ನ ಒಪ್ಪಿಕೊಳ್ಳಬೇಕು ತಾನೆ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!