ಎನ್ನ ಮನದ ಗುಡಿಯ ಒಳಗೆ, ನೀನು ಬಂದು ಕರೆದೆಯಾ

ಮೌನ ಬಿಡುತ ಸೆಡವು ಮರೆತು, ದ್ವೇಷ ಕೊಂದು ಕರೆದೆಯಾ

 

ಇಲ್ಲೆ ಇದ್ದ ನನ್ನನಾಗ,ದೂರವಿರಿಸಿ ಸಲಹದೇ

ಬಿಟ್ಟ ಭಾವ ನೂರು ಇರಲಿ,ದೋಷ ಬೆಂದು ಕರೆದೆಯಾ

 

ಹೊಸತು ಜನರು ಬೇಡವೆಂದು, ದೂರ ಹೋಗಿ ಕುಳಿತೆಯೋ

ಹಳತಿನೊಳಗೆ ಹರೆಯವಿರಲು,ಸತತ ನೊಂದು ಕರೆದೆಯಾ

 

ಪ್ರೀತಿ ಒಳಗೆ ಪ್ರೇಮ ಇಹುದು, ಅರಿಯದಿರಲು ನಡೆದೆಯಾ

ಜೀವ ನಯನ ಮೋಹದೊಳಗೆ, ಸೇರಿ ಇಂದು ಕರೆದೆಯಾ

 

ಕತೆಯ ಹಿಂದೆ, ಒಲವ ಮುಂದೆ, ಸಾಗುತಿರುವ ಈಶನೇ

ಜತನದಿಂದ ಕಾಯ್ದ ಮನವ, ಹಾಗೆ ತಂದು ಕರೆದೆಯಾ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ