ಮುಂದೊಂದು ದಿನ ಹೀಗೆಯೇ, ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ
ಮತ್ತೆಂದೂ ಮರಳಿ ಬರುವೆನು, ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ
ಎದೆಯಲ್ಲಿ ನೋವದುವು ಬಂದಿತೆಂದರೇ,ಆಸ್ಪತ್ರೆಯೆಡೆಗೆ ಓಡುವ ಜಾಯಮಾನ
ಅರಮನೆಯಲ್ಲಿ ಇದ್ದ ಮನುಷ್ಯನಿಗೂ, ಸಾವನ್ನು ಕಸಿಯಲಾಗುವುದಿಲ್ಲ ಗೆಳೆಯ
ಮೊದಲೆಲ್ಲವು ಹಳ್ಳಿಯಲ್ಲಿರುವ ಮದ್ದಿನಲ್ಲೇ, ಕಡಿಮೆ ಆಗುತ್ತಿತ್ತು ಕಾಯಿಲೆಗಳೆಂದೂ
ಏನೂ ಇಲ್ಲದವರಿಗೂ ಈಗೀಗ, ಆಸ್ಪತ್ರೆಯ ಸಹವಾಸ ತಪ್ಪಿಸಲಾಗುವುದಿಲ್ಲ ಗೆಳೆಯ
ಜನಸಾಮಾನ್ಯರ ನೋವುಗಳು, ಉಳ್ಳವರ ಮಹಲಿನ ಒಳಗಿಂದು, ತೂರಿಕೊಂಡು ಹೋಗಲಿ
ನಮ್ಮವರ ಬಾಗುವ ಗುಣವನ್ನು, ಮತ್ತೆಂದೂ ಹೇಳಿ ಬದಲಾಯಿಸಲಾಗುವುದಿಲ್ಲ ಗೆಳೆಯ
ಈಶನ ಎಚ್ಚರಿಸುವ ಗುಣವನ್ನು ಬಡತನದಲಿರುವವರು, ಅರಿಯದೆಯೆ ಹೋದರೆಯಿಂದು
ಬಡಪಾಯಿಯ ತಲೆಗೆ ಅವನದೇ ಕೈಯೆಂದರು, ಮತ್ತೆಂದೂ ನಿಲ್ಲಿಸಲಾಗುವುದಿಲ್ಲ ಗೆಳೆಯ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!