ಅಲ್ಲೊಂದು ಕಾಗದ ಪತ್ರ ತನ್ನೊಳಗೆ ಮದುವೆಯ ಶುಭ ಸುದ್ದಿಯನ್ನು ಹೊತ್ತು ಮನೆ ಮನೆಗೆ ತಲುಪುತ್ತಿತ್ತು. ಹಾಗೆ ತಲುಪಿದ ಕಾಗದ ಪತ್ರಕ್ಕೆ ತುಂಬಾ ನೋವಿನಿಸುತ್ತಿತ್ತು. ದಿನಾಂಕ ಸ್ಥಳ ಹೆಸರು ಇವುಗಳಿಗೆ ಮಾತ್ರ ಕಣ್ಣಾಡಿಸಿ ಎಲ್ಲೋ ಒಂದು ಮೂಲೆಯಲ್ಲಿ ಇಡುತ್ತಿದ್ದರು. ಆನಂತರ ಧೂಳು, ಬಲೆಯೋ ಕಟ್ಟಿಕೊಂಡು ಕಸದ ಬುಟ್ಟಿಯಲ್ಲಿ ಮಲಗಿಬಿಡುತ್ತಿತ್ತು. ಮದುವೆಯಂತಹ ಸಂಭ್ರಮದ ಸುದ್ದಿಯನ್ನು ಹೊತ್ತು ತಂದ ತನಗೆ ಒಂದಿನಿತೂ ಗೌರವ ಸಿಗದಿರುವುದಕ್ಕೆ ಅಳು ಬರ್ತಾ ಇದ್ದರೂ ಸಹ ಅಳುವಂತಿರಲಿಲ್ಲ, ಯಾಕೆಂದರೆ ಮದುವೆಯಾಗಿ ಬದುಕಬೇಕಾದವರು ಸಂಭ್ರಮದಲ್ಲಿರಬೇಕು ಅನ್ನೋದು ಕಾಗದದ ಯೋಚನೆ. ಹಲವರ ಬಳಿ ಬೇರೆ ಬೇರೆ ರೀತಿಯಲ್ಲಿ ಕೇಳಿಕೊಂಡಿದ್ದರು ಈಗಲೂ ಮದುವೆಯ ಪತ್ರಿಕೆ ಮನೆಯ ಮೂಲೆ ಮೂಲೆಯಲ್ಲಿ ಕಾಯುತ್ತಿದೆ. ಕೆಲವು ಕ್ಷಣಗಳಲ್ಲಿ ಕಸದ ಬುಟ್ಟಿಯ ಕಡೆಗೆ ಓಡುವ ತಯಾರಿಯನ್ನು ನಡೆಸುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!