ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ "ಕರ್ನಾಟಕ ವಿಕಾಸ"
ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಕರ್ನಾಟಕ ವಿಕಾಸ". ಕಳೆದ ೬೬ ವರ್ಷಗಳಿಂದ "ಕರ್ನಾಟಕ ವಿಕಾಸ" ಪ್ರಕಟವಾಗುತ್ತಿದೆ. ೫೪ ಪುಟಗಳೊಂದಿಗೆ ಬಹುವರ್ಣಗಳಲ್ಲಿ, ಪುಸ್ತಕ ರೂಪದಲ್ಲಿ ಬರುವ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿ. ವಾರ್ಷಿಕ ಚಂದಾ ಮೊತ್ತ ನೂರು ರೂಪಾಯಿಗಳು.
ಇಲಾಖೆಯಲ್ಲಿನ ಅಧಿಕಾರಿಗಳು ಬದಲಾದಂತೆ ಪತ್ರಿಕೆಯ ಸಂಪಾದಕೀಯ ವಿಭಾಗ ಬದಲಾಗುತ್ತಿರುತ್ತದೆ. ಪ್ರಸ್ತುತ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಉಪ ಕಾರ್ಯದರ್ಶಿ (ಆಡಳಿತ) ವಾಣಿ ಬಿ. ಪ್ರಕಾಶಕರು ಮತ್ತು ಪ್ರಧಾನ ಸಂಪಾದಕರು. ಉಪ ನಿರ್ದೇಶಕರಾದ ಗಗನ್ ಎ. ಎಸ್. ಸಂಪಾದಕರು. ರೂಪ ಎನ್. ಸಹಾಯಕ ಸಂಪಾದಕರು. ಬೆಂಗಳೂರು ಗಾಂಧಿನಗರ ಕೆಂಪೇಗೌಡ ರಸ್ತೆ ಕಾಳಿದಾಸ ಮಾರ್ಗ ದಲ್ಲಿರುವ ಇಲಾಖಾ ಕಟ್ಟಡದಲ್ಲಿ ಪತ್ರಿಕಾ ಕಾರ್ಯಾಲಯವಿದೆ. ರಾಜಾಜಿನಗರ ಇಂಡಸ್ಟ್ರೀಯಲ್ ಟೌನ್ ನಲ್ಲಿರುವ ರಾಜ್ ಹನ್ಸ್ ಎಂಟರ್ ಪ್ರೈಸಸ್ ನಲ್ಲಿ ಮುದ್ರಣವಾಗುತ್ತಿದೆ.
ಪತ್ರಿಕೆಯಲ್ಲಿ ಇಲಾಖಾ ಸಚಿವರ ಅಂಕಣ, ಅಪರ ಮುಖ್ಯ ಕಾರ್ಯದರ್ಶಿಗಳಿಬ್ಬರ ಆಶಯ ನುಡಿ, ಸಂದೇಶ, ಆಯುಕ್ತರುಗಳ ಅಂಕಣ, ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳ, ಗ್ರಾಪಂ, ತಾಪಂ, ಜಿಪಂ ಸಹಿತ ವಿವಿಧ ಹಂತಗಳಲ್ಲಿ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳ ಲೇಖನಗಳು, ಸಾಧಕರ ಯಶೋಗಾಥೆಗಳು, ಇಲಾಖೆಯ ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳ ಸಹಿತ ವಿವಿಧ ರೀತಿಯ ಲೇಖನಗಳು, ವರದಿಗಳು, ಸುತ್ತೋಲೆಗಳು ಇತ್ಯಾದಿಗಳು ಪ್ರಕಟವಾಗುತ್ತವೆ.
-ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!