ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ "ವಾರ್ತಾ ಜನಪದ"

ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಳೆದ ಒಂಭತ್ತು ವರುಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ವಾರ್ತಾ ಜನಪದ". ಪುಸ್ತಕ ರೂಪದಲ್ಲಿ ಬಹುವರ್ಣಗಳೊಂದಿಗೆ ೫೨ ಪುಟಗಳಲ್ಲಿ ಬರುವ "ವಾರ್ತಾ ಜನಪದ" ವಾರ್ಷಿಕ ಚಂದಾ ಮೊತ್ತ ೨೫ ರೂಪಾಯಿ. ಬೆಂಗಳೂರು ಬನಶಂಕರಿಯ ವಿದ್ಯಾಪೀಠ ವೃತ್ತದಲ್ಲಿರುವ ಲಾವಣ್ಯ ಮುದ್ರಣದಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ.

ವಾರ್ತಾ ಇಲಾಖೆಯ ಆಯುಕ್ತರು ಪತ್ರಿಕೆಯ ಪ್ರಕಾಶಕರು ಮತ್ತು ಪ್ರಧಾನ ಸಂಪಾದಕರಾಗಿರುತ್ತಾರೆ. ಪ್ರಸ್ತುತ ಹೇಮಂತ್ ಎಂ. ನಿಂಬಾಳ್ಕರ್ ಐ ಪಿ ಎಸ್ ಪ್ರಧಾನ ಸಂಪಾದಕರು. ಜಂಟಿ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಹಾಗೂ ಉಪ ನಿರ್ದೇಶಕರಾದ ಶಫಿ ಸಾದುದ್ಧೀನ್ ಸಂಪಾದಕೀಯ ಸಲಹೆಗಾರರಾಗಿರುತ್ತಾರೆ. ಬಿ. ಜಿ. ಪೂರ್ಣಿಮಾ ಉಪಸಂಪಾದಕರು.

ಬೆಂಗಳೂರು ಭಗವಾನ್ ಮಹಾವೀರ ರಸ್ತೆಯಲ್ಲಿರುವ ವಾರ್ತಾ ಸೌಧದಲ್ಲಿ ಪತ್ರಿಕಾಲಯ ಹೊಂದಿದೆ. ಕರ್ನಾಟಕ ಸರಕಾರದ ವಿವಿಧ ಯೋಜನೆಗಳ ಪರಿಚಯ ಲೇಖನ, ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಅಲ್ಲದೆ ನೆಲ ಜಲ ಭಾಷೆ ಸಹಿತ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಲೇಖನಗಳು, ಸಾಧಕ ಸಂಸ್ಥೆಗಳು ಮತ್ತು ವ್ಯಕ್ತಿಗಳ ಪರಿಚಯ ಲೇಖನ ಇತ್ಯಾದಿಗಳು ವಾರ್ತಾ ಜನಪದದಲ್ಲಿ ಪ್ರಕಟವಾಗುತ್ತವೆ.

~ ಶ್ರೀರಾಮ ದಿವಾಣ