ಅಂತಸ್ತಿನ

ಮನೆಯೊಳಗೆ,

ಮನವೂ

ಬಾಡದೆ ಇರಲಿ

ಎಲ್ಲರೊಂದಿಗೆ 

ಬೆರೆತು

ಬೆಳಕಾಗಲಿ !!

*

ಏನಕೇನ

ಹಳಿದರು

ಬರೆಯುತ್ತಾ

ಸಾಗು

ನೀ

ಬರೆದಿರುವುದು

ಸರಿಯೆಂದು

ನಿನ್ನ

ಮನಸಿಗಿದ್ದರೆ

ಸಾಕು !

*

ರೈತನಾದವನು ತನ್ನ 

ಮಕ್ಕಳನ್ನು 

ರೈತನಾಗಲು ಬಿಡದೇ 

ಇರಲು ಕಾರಣ ?  

ಚಿಂತಿಸುವ 

ಕಾಲ ಸನ್ನಿಹಿತವಾಗಿದೆ !

*

ಹೊಗಳಿಕೆಯ

ನಡುವೆ

ಉತ್ತಮರು,

ಕಟುಕನ

ಕೈಯಲ್ಲಿ

ಮಾಲೆ

ಹಾಕಿಸಿ ಕೊಂಡ

ಕುರಿಯಂತೆ

ಉಬ್ಬಿ

ಗೋರಿ

ಸೇರಿದರು !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ