ಮುನಿಸು ನೀನು ತೊರೆಯೆ ನೀರೆ

ಮನಕೆ ಹಗುರ ಕೇಳಲೆ

ಮನದ ಪ್ರೇಮ ಬಾಳಿಗೊದಗೆ

ಮನೆಗೆ ಹರುಷ ಹೇಳಲೆ 

 

ತನುವಿನೊಳಗೆ ಮತ್ತೆ ಸಿಡುಕು 

ಕನಲಿ ಕೊಂದ ಹೂಬನ 

ಕನಸ ವೇಷದೊಳಗೆ ಬದುಕು 

ಮಿನುಗದಾಯ್ತು ಮೈಮನ 

 

ಮುನಿಸಿನೊಳಗೆ ಕುಳಿತೆಯಿರಲು 

ಮನಕೆ ಬರಡು ಬಂಧನ

ಮನಸಿನೊಳಗೆ ದೇಹ ಬಾಧೆ 

ತನುವಲಿಹುದೆ ಜೀವನ

 

ಮುನಿಯ ಬೇಡ ಒಲವ ತೋರು 

ಮನದ ಒಲುಮೆ ಸುಂದರಿ 

ಮನಸಿನಾಟ ಒಡಲೆ ಸವಿಯು 

ನನಸ ಬಾಳ್ವೆ ಕಿನ್ನರಿ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ