ನನ್ನ ತಪ್ಪೇನಿದೆ. ಗಟ್ಟಿಯಾಗಿ ಬೇರಿಳಿಸಿ ಎತ್ತರವಾಗಿ ಬೆಳೆದು ನಿಂತದ್ದೇ. ನೆರಳು‌ ನೀಡಿ ಪಕ್ಷಿಗಳಿಗೆ ಆಶ್ರಯ ನೀಡಿದ್ದೇ ತಪ್ಪಾ? ಗೊತ್ತಿಲ್ಲ.‌ಹಲವು ವರ್ಷಗಳಿಂದ ಬೆಳೆದು‌ ನಿಂತವ ನನ್ನನ್ಯಾಕೆ ಕಡಿದುರುಳಿಸುವ ಯೋಚನೆ ಮಾಡಿದ್ದಾರೆ. ನನಗೂ ಗೊತ್ತಿರಲಿಲ್ಲ ನಿಮ್ಮಂತ ಜನರು ಓಡಾಟಕ್ಕೆ ದೊಡ್ಡದಾದ ರಸ್ತೆ ಇದೆ. ಅದು ಸಾಕಾಗೋದಿಲ್ಲ ಅಂದು ನನ್ನನ್ನ ಸಾಯಿಸಿ ನೀವೇನು ಸಂಭ್ರಮದಿಂದ ಓಡಾಡುತ್ತೀರಾ? ನಿಮಗೆ ಒಬ್ಬರ ಸಮಾದಿ ಮೇಲೆ ಓಡಾಡುವ ಆಸೆ ಯಾಕೆ? ನೆರಳನ್ನ ಮಾರಿ ಬಿಸಿಲನ್ನ ಖರೀದಿಸಿ  ಹುಚ್ಚಾಟವೇಕೆ? ನನ್ನ ಮರಣದ ಪರಿಣಾಮ‌ ನಿಮಗರ್ಥವಾಗುತ್ತಿಲ್ಲ, ಈ ಕ್ಷಣಕ್ಕೆ ಒಳ್ಳೆಯದು ಅನ್ನಿಸಿದರೂ ಆಮೇಲಿನ‌ ಪರಿಣಾಮ ತುಂಬಾ ಕೆಟ್ಟದ್ದು ಎಷ್ಟೆಂದರೂ ಕೇಳದವ ನೀನು, ಅನುಭವಿಸಿ, ನನ್ನ ಸಾವನ್ನ ಬಯಸಿದ್ದೀಯಾ, ನಿನ್ನ ಕೊನೆಗಾಲವೂ ಹತ್ತಿರದಲ್ಲಿದೆ ಅಷ್ಟೆ. ಉದ್ಯಾವರದ ರಸ್ತೆ ಬದಿ ನಿಂತ ಮರಗಳು ನೋವಿನಿಂದಲೇ ಮಾತನಾಡಿದವು.

-ಧೀರಜ್ ಬೆಳ್ಳಾರೆ                                 

ಚಿತ್ರ ಕೃಪೆ: ಇಂಟರ್ನೆಟ್ ತಾಣ