ಮೌನವಾಗಿ ನೋವುಣ್ಣುತ್ತಿದ್ದಾನೆ. ಆತನ ದೇಹವೇ ಆತನ ಮಾತನ್ನು ಕೇಳುತ್ತಿಲ್ಲ. ಹೀಗಿರುವಾಗ ತನ್ನ ಸುತ್ತಮುತ್ತ ನಡೆಯುವ ಅನ್ಯಾಯಗಳನ್ನ ತಪ್ಪುಗಳನ್ನ ಪ್ರಶ್ನಿಸುವುದಕ್ಕೆ ಸಾಧ್ಯವಾಗ್ತಾ ಇಲ್ಲ. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಒಳಿತನ್ನು ಬೋಧಿಸಿದವ ಹೇಗೆ ವರ್ತಿಸಬೇಕೆಂದು ಸಮಾಜದಲ್ಲಿರುವವರಿಗೆ ತಿಳಿಸಿಕೊಟ್ಟವ. ದೇಹ ಗಟ್ಟಿಯಾಗಿ ನಿಲ್ಲುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ. ಮನೆಯ ಮಕ್ಕಳೇ ತಪ್ಪು ದಾರಿಯಲ್ಲಿ ಸಾಗುತ್ತಿದ್ದಾರೆ ಅವರ ತಪ್ಪನ್ನು ತಪ್ಪು ಎಂದು ತಿಳಿಸಿ ಹೇಳುವ ಹಾಗಿಲ್ಲ, ಮೌನವಾಗಿ ಬಿಟ್ಟಿದ್ದಾನೆ. ಇದೀಗ ಯಾರ ತಪ್ಪನ್ನು ತಿದ್ದಲು ಹೋಗುತ್ತಿಲ್ಲ. ಕಾರಣ ಮನೆಯೊಳಗಿನ ಉತ್ತರ ಪತ್ರಿಕೆಯ ತಪ್ಪು ಹುಡುಕದವರಿಗೆ ಕಂಡವರ ಜೀವನದ ಉತ್ತರ ಪತ್ರಿಕೆಯನ್ನು ತಿದ್ದುವುದು ಹೇಗೆ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ