ಕನಸುಗಳೇ ಅವನ ಬದುಕಿನ ಜೀವಾಳ. ಮನೆ ಗಟ್ಟಿಯಾಗಬೇಕಿತ್ತು, ಮನೆಯವರ ನೆಮ್ಮದಿ ಉಸಿರಾಡಬೇಕಿತ್ತು, ಹಾಗಾಗಿ ಶಿಕ್ಷಣ ಮುಂದುವರಿಸುವ ಹಾಗಿರಲಿಲ್ಲ. ಕೆಲಸವೊಂದೇ ಕೊನೆಯ ದಾರಿ. ಶ್ರಮವಹಿಸಿ ದುಡಿಮೆಯನ್ನ ನಂಬಿಕೊಂಡ. ತಂಗಿಯ ಕನಸುಗಳ ಸಾಕಾರಕ್ಕೆ ಹೆಚ್ಚಿನ ಶ್ರಮ ಪಟ್ಟ. ಅವಳ ಬದುಕಿನ ಬಗ್ಗೆ ಆಸೆಗಳ ಗೋಪುರ ಕಟ್ಟಿಕೊಂಡ. ಒಂದು ದಿನ ಮನೆ ಬಿಟ್ಟವಳು ಮದುವೆಯ ಸುದ್ದಿ ತಿಳಿಸಿದಳು. ಜವಾಬ್ದಾರಿಯ ಅರ್ಥವೇ ತಿಳಿಯದವನ ಜೊತೆ ಬದುಕುವ ನಿರ್ಧಾರ ಕೈಗೊಂಡಳು. ಎರಡೂ ಮನೆಯಿಂದ ಹೊರನಡೆದಳು. ಅವಳ ಕನಸುಗಳು ಅಲ್ಲೇ ನಿಂತು ಬಿಟ್ಟಿತು. ದಿನದ ಬದುಕಿಗೆ ಅವಳು ಕೂಲಿ ಕೆಲಸವನ್ನ ಅವಲಂಬಿಸಿದಳು. ಅವನ ಮನೆಯ ಗೌರವ ಅವನತಿಯ ಕಡೆಗೆ ಸಾಗಿತು. ಅವನು ಆಗಾಗ ಮೌನವಹಿಸಿ ಕಣ್ಣೀರು ಇಳಿಸುತ್ತಾ...ಸ್ವಂತ ತಂಗಿಯೇ ವಿಷಯ ಮುಚ್ಚಿಟ್ಟ ಮಾಡಿದ ಮೋಸವನ್ನ ದಿನವೂ ನೆನೆದು ಕಣ್ಣೀರು ಇಳಿಸುತ್ತಾನೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!