ದೊಡ್ಡದಾದ ಒಂದು ಊರಿನಲ್ಲಿ ಎರಡು ಮನೆಗಳನ್ನು ಜನರು ಕಟ್ಟಿದ್ದಾರೆ. ತುಂಬಾ ಅದ್ಭುತವಾದ ಮನೆ ಆ ಎರಡು ಮನೆಗಳಿಗೆ ಬಂದು ಹೋಗುವವರಿಗೆ ಅವರು ಜೀವನದಲ್ಲಿ ಬಯಸಿದಂತಹ ಎಲ್ಲಾ ಖುಷಿಗಳು ಸಿಕ್ತಾ ಇತ್ತು ನೋವುಗಳು ಮಾಯವಾಗ್ತಾ ಇತ್ತು. ಅದು ಎಲ್ಲರ ಮನೆಯ ಆಗಿತ್ತು. ಆ ಊರಿನ ಸರಕಾರಕ್ಕೆ  ಹೆಚ್ಚು ದುಡ್ಡು ಬೇಕಾಗಿತ್ತು. ಒಂದು ಮನೆಯನ್ನ ತನ್ನ ವಶಕ್ಕೆ ಪಡೆದುಕೊಂಡಿತು. ಆ ಮನೆಯನ್ನ ನೋಡುವುದಕ್ಕೆ ಬರುವ ಎಲ್ಲರೂ ಹಾಕಿದಂತಹ ದುಡ್ಡಿನಲ್ಲಿ ಆ ಮನೆಯನ್ನ ನಡೆಸುವುದಕ್ಕೆ ಸ್ವಲ್ಪ ಹಣ ನೀಡಿ ಉಳಿದದ್ದನ್ನು ತಮ್ಮ ಸರಕಾರ ನಡೆಸುವುದಕ್ಕೆ ಬಳಸಿಕೊಳ್ಳುವುದಕ್ಕೆ ಪ್ರಾರಂಭ ಮಾಡಿದೆ. ಸರಕಾರ ನಡೆಸುತ್ತಿದ್ದ ಮನೆ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವುದಕ್ಕೆ ಪ್ರಾರಂಭ ಮಾಡಿತು. ಆ ಮನೆಗೆ ಬಂದು ಹೋಗುವವರಿಗೆ ಸೂಕ್ತ ವ್ಯವಸ್ಥೆ ಇಲ್ಲ. ಆ ಮನೆಯಲ್ಲಿ ಸರಕಾರ ಹೆಚ್ಚು ಹೆಚ್ಚು ಹಣ ಸಂಪಾದನೆ ಮಾಡುವುದಕ್ಕೆ ಬೇರೆ ಬೇರೆ ಯೋಜನೆಗಳನ್ನೇ ರೂಪಿಸಿತೇ ಹೊರತು ಜನರ ಬಗ್ಗೆ ಗಮನ ಹರಿಸಲೇ ಇಲ್ಲ. ಅದರಿಂದ ಸಮಾಜಕ್ಕೂ ಏನು ಹೊಸತು ಸಿಗಲೇ ಇಲ್ಲ .ಅದೇ ಜನರೇ ನಡೆಸ್ತಾ ಇರುವಂತಹ ಪಕ್ಕದ ಮನೆಯನ್ನು ತುಂಬಾ ಅಚ್ಚುಕಟ್ಟಾಗಿ ಜನರಿಗೆ ಉಪಯೋಗ ಆಗವ ಹಾಗೆ ಮನೆಯನ್ನು ನಿರ್ವಹಿಸ್ತಾ ಹೋದರು. ಜನರೇ ನಡೆಸುವ ಆ ಮನೆಗೆ ಬಂದಾಗ ಅವರ ಬದುಕು ಬದಲಾಯಿತು, ಮನೆಯು ತುಂಬಾ ಚೆನ್ನಾಗಿ ಬೆಳೆದು ನಿಂತಿತು. ಹಾಗಾಗಿ ಮನೆ ಯಾರ ಕೈಯಲ್ಲಿರಬೇಕು ಅನ್ನೋದನ್ನ ನಾವೇ ನಿರ್ಧಾರ ಮಾಡಬೇಕು... ಸರಕಾರ ನಿರ್ವಹಿಸುವ ಮನೆ ಕೇಳಿಕೊಳ್ತಾ ಇದೆ ತನ್ನನ್ನಾ ಜನರೇ ತೆಗೆದುಕೊಳ್ಳಲಿ ಎಂದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ